ಶನಿವಾರ, ಮೇ 8, 2021
19 °C

ನಿಟ್ರೆ: ಸೆ.20ರಿಂದ ಜಾತ್ರಾ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ತಾಲ್ಲೂಕಿನ ನಿಟ್ರೆ ಗ್ರಾಮದಲ್ಲಿ ಸೆ.20 ಹಾಗೂ 21ರಂದು ಪಾರ್ವತಾಂಬೆ ಜಾತ್ರಾ ಮಹೋತ್ಸವ ನಡೆಯಲಿದೆ.ಜಾತ್ರೆ ಅಂಗವಾಗಿ  ಗ್ರಾಮದ ದೇವಾಲಯಗಳಿಗೆ ಸುಣ್ಣ ಬಳಿಯುವ ಕೆಲಸ ಭರದಿಂದ ಸಾಗಿದೆ. ಜಾತ್ರೆ ಹಿಂದಿನ ದಿನ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರಲ್ಲಿ ಪ್ರತಿ ಮನೆಗೂ ಒಬ್ಬ ಪ್ರತಿನಿಧಿ ಹೋಗಿ ದೇಶೀಪುರದ ಅರಣ್ಯ ಪ್ರದೇಶದ ಅಲ್ಲಹಳ್ಳಿ ಮಾರಮ್ಮ  (ಪಾರ್ವತಾಂಬೆ) ದೇವಿಗೆ ಪೂಜೆ ಸಲ್ಲಿಸುತ್ತಾರೆ.ಆ ದಿನ ಅಲ್ಲೇ ಉಳಿಯುವುದು ವಾಡಿಕೆ. ಮಾರನೇ ದಿನ ಬೆಳಿಗ್ಗೆ ತೀರ್ಥ ಮತ್ತು ಪ್ರಸಾದ ತಂದ ನಂತರ ಗ್ರಾಮದಲ್ಲಿ ಉತ್ಸವ ಪ್ರಾರಂಭಗೊಳ್ಳುತ್ತವೆ ಎಂದು ಗ್ರಾಮದ ಹಿರಿಯರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.