ನಿಡುಮಾಮಿಡಿ: ನಿಧಿ ಶೋಧನೆಗೆ ಬಂಡೆ ಅಡ್ಡಿ!

7
ಪೊಲೀಸ್‌ ಠಾಣೆ ಸ್ಥಾಪಿಸಲು ವೀರಭದ್ರ ಚನ್ನಮಲ್ಲ ಸ್ವಾಮೀಜಿ ಒತ್ತಾಯ

ನಿಡುಮಾಮಿಡಿ: ನಿಧಿ ಶೋಧನೆಗೆ ಬಂಡೆ ಅಡ್ಡಿ!

Published:
Updated:

ಬಾಗೇಪಲ್ಲಿ: ತೀವ್ರ ಕುತೂಹಲ ಕೆರಳಿಸಿದ್ದ ತಾಲ್ಲೂಕಿನ ಗುಳೂರು ನಿಡುಮಾಮಿಡಿ ಮಹಾಸಂಸ್ಥಾನ ಮಠದ ನಿಧಿ ಶೋಧನೆ ಕಾರ್ಯವು ಸೋಮವಾರ ನಿರೀಕ್ಷಿತ ಗುರಿ ಮುಟ್ಟದೇ ಸ್ಥಗಿತಗೊಂಡಿತು.ಪೊಲೀಸರ ಸಮ್ಮುಖದಲ್ಲಿಯೇ ಆರಂಭವಾದ ಕೆಲಸವು ದೊಡ್ಡಬಂಡೆ ಅಡ್ಡಬಂದ ಪರಿಣಾಮ ಸ್ಥಗಿತಗೊಳಿಸ ಲಾಯಿತು. ಬಂಡೆ ತೆರವು ಗೊಳಿಸಿದರೆ ಗೋಡೆಗಳಿಗೆ ಮತ್ತು ಇಡೀ ಆವರಣಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿ ನಿಧಿ ಶೋಧನೆ ನಿಲ್ಲಿಸಲಾಯಿತು.ನಿಧಿ ಸಿಕ್ಕರೆ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗು ವುದು ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಘೋಷಿ ಸಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಸಾಕ್ಷಿಯಾಗಲು  ಮಠದ ಭಕ್ತಾದಿಗಳು ಜಮಾಯಿಸಿದ್ದರು. ಮಠದ ಆವರಣ ದಲ್ಲಿ ಕೊಠಡಿಯೊಳಗಿನ ಬಂಡೆ ತೆರವು ಗೊಳಿಸುವ ಕಾರ್ಯ ಆರಂಭವಾದ ಕೂಡಲೇ ಎಲ್ಲರೂ ಕುತೂಹಲದಿಂದ ವೀಕ್ಷಿಸಿದರು.ಮಠದ ನೆಲಕ್ಕೆ ಸಮವಾಗಿದ್ದ ಬಂಡೆ ಯ ಸುತ್ತಲೂ ತೆರವು ಕಾರ್ಯಾಚರಣೆ ಕೈಗೊಂಡು 15 ಅಡಿಗಳ ಆಳ ಹೋಗು ವವರೆಗೆ ಏನೂ ಆಗಲಿಲ್ಲ. ಆದರೆ ಅದರ ನಂತರವೂ ಕಾರ್ಯಾಚರಣೆ ಮುಂದುವ ರಿದಾಗ ಕೊಠಡಿ ಮತ್ತು ಮಠದ ಗೋಡೆ ಯಲ್ಲಿ ಬಿರುಕು ಕಾಣಿಸಿಕೊಂಡಿತು. ಇದರಿಂದ ಆತಂಕಗೊಂಡ ಸ್ವಾಮೀಜಿ, ಮಠದ ಟ್ರಸ್ಟಿಗಳು, ಭಕ್ತಾದಿಗಳು ಮತ್ತಿತರರು ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದರು.ನಂತರ ಮಠದ ಆವರಣದಲ್ಲಿ ನಡೆದ ಟ್ರಸ್ಟ್‌ ಮತ್ತು ಭಕ್ತರ ಸಭೆಯಲ್ಲಿ ಪುರಾತತ್ವ ಇಲಾಖೆ ನಿವೃತ್ತ ನಿರ್ದೇಶಕ ಡಾ.ಡಿ.ವಿ. ದೇವರಾಜ್‌ ಮಾತನಾಡಿ,  ‘ಹಳೇ ಕಾಲದ ದೇಗುಲ, ಮಠಗಳಲ್ಲಿ ಸಂಪತ್ತು ಇದೆ ಎಂಬುದು ಕೇವಲ ಮೂಢನಂಬಿಕೆ. ಕೆಲ ಪಟ್ಟಭಧ್ರ ಹಿತಾ ಸಕ್ತಿಗಳು ಮಠದ ಪಾವಿತ್ರ್ಯತೆ ಹಾಳು ಮಾಡಲು ನಿಧಿ ಇದೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಸಾಹಿತ್ಯ  ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿರುವ ಜಚನಿ ಅವರ ಕನಸು ನನಸು ಮಾಡಲು ಎಲ್ಲ ವರ್ಗದ ಜನರು ಮಠದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.ರಾಜ್ಯ ಹಿಂದುಳಿದ ವರ್ಗಗಳ ಆಯೋ ಗದ ಮಾಜಿ ಸದಸ್ಯ ಪ್ರೊ.ಎನ್.ವಿ. ನರಸಿಂಹಯ್ಯ ಮಾತನಾಡಿ, ನಿಧಿ ಇದೆ ಎಂಬುದು ಆಂಧ್ರಪ್ರದೇಶದ ಕೆಲವು ಪುಡಾರಿಗಳು ಹಬ್ಬಿಸಿರುವ ವದಂತಿ. ನೈಸರ್ಗಿಕ ಏಕಶಿಲೆಯಿಂದ ಕೂಡಿರುವ ಬಂಡೆ ಕೆಳಗೆ ನಿಧಿಯಿಲ್ಲ ಎಂದರು.ನಿಡುಮಾಮಿಡಿ ಮಹಾಸಂಸ್ಥಾನದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ ‘ಜಚನಿಯವರ ಆಶಯದಂತೆ ಮಠದ ವತಿಯಿಂದ

ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿದ್ದೇನೆ. ಮಠದ ಒಳ ಅಥವಾ ಹೊರ ಆವರಣ ದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಂಡರೂ ಅದನ್ನು

ಹಾಳು ಮಾಡಲು ಕೆಲವರು ಪ್ರಯತ್ನಿಸುತ್ತಾರೆ. ನಿಧಿಗಳ್ಳರಂತೂ ಪದೇಪದೇ ದಾಳಿ ಮಾಡಿ, ಮಠಕ್ಕೆ ಹಾನಿ ಮಾಡುತ್ತಾರೆ. ಮಠದ ಸಮೀಪದಲ್ಲೇ ಪೊಲೀಸ್‌ ಠಾಣೆಯನ್ನು ಸ್ಥಾಪಿಸಬೇಕು. ಮಠ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry