ನಿಡುಮಾಮಿಡಿ ಶ್ರೀ ಕ್ಷಮೆ ಕೋರಲಿ

7

ನಿಡುಮಾಮಿಡಿ ಶ್ರೀ ಕ್ಷಮೆ ಕೋರಲಿ

Published:
Updated:

ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು ಎಂದು ಹೇಳಿದ ಪಾಪು ಅವರು ತಮ್ಮ ಮಾತಿಗೆ ಸ್ಪಷ್ಟೀಕರಣವನ್ನೂ ನೀಡಿದ್ದಾಯಿತು. ಅದು ಮುಗಿದ ಅಧ್ಯಾಯ, ಅಂತಹುದರಲ್ಲಿ, ಬೆಂಗಳೂರಿನಲ್ಲಿ ನಡೆದ ಕಂಬಾರ-ಚಂಪಾ ಅಭಿನಂದನಾ ಸಮಾರಂಭದಲ್ಲಿ ಮತ್ತೆ ಈ ವಿವಾದ ಏಕೆ ನುಸುಳಿತೋ ಅರ್ಥವಾಗುತ್ತಿಲ್ಲ.

ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬರಲಾರದು ಎಂದು ವಶೀಲಿ ಮಾಡಿದವರಂತೆ ಮಾತನಾಡಿದ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು, ಭೈರಪ್ಪನವರಿಗೆ ಜ್ಞಾನಪೀಠ ಬರುವುದಾದರೆ, ಮರಣೋತ್ತರವಾಗಿ ಬರಲಿ ಎಂದು ಅಪ್ಪಣೆ ಕೊಡಿಸಿದ್ದಾರೆ. ಈ ಮೂಲಕ ತಮ್ಮ ಕ್ರೂರ ಮನಸ್ಸನ್ನು ಹರಿಯಬಿಟ್ಟು ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಂಡಿದ್ದಾರೆ. ಈ ಬಗ್ಗೆ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry