ಭಾನುವಾರ, ಮೇ 16, 2021
28 °C

ನಿಡುಸುಯ್ಯುವ ಬಿಸಿಲಿಗೆ ಎಳನೀರಿಗೆ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನುಮಸಾಗರ: ಕಳೆದ ತಿಂಗಳಿನಿಂದ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು ಸಾರ್ವಜನಿಕರು ನಿಡುಸುಯ್ಯುವ ಬಿಸಿಲಿಗೆ ಬಸವಳಿದು ಎಳನೀರು ಹಾಗೂ ತಂಪುಪಾನೀಯಗಳ ಮೊರೆ ಹೋಗುತ್ತಿರುವುದು ಕಂಡು ಬರುತ್ತಿದೆ.ಈ ಹಿಂದೆ ಕೇವಲ ಬೇಸಿಗೆ ಸಮಯದಲ್ಲಿ ಎಳನೀರು ವ್ಯಾಪಾರ ನಡಿತಿತ್ತು, ಆದ್ರ ಇತ್ತೀಚೆಗೆ ಮೂರು ಕಾಲದಾಗನೂ ಎಳನೀರಿಗೆ ಬೇಡಿಕೆ ಇರತೈತ್ರಿ ಎಂದು ವ್ಯಾಪಾರಿ ಆದಮ್ ಬದಾಮಿ ಹೇಳುತ್ತಾರೆ.

ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಎಳನೀರು ಪೂರೈಕೆಯಾಗುತ್ತಿಲ್ಲ. ಈ ಭಾಗದಲ್ಲಿ ತೋಟಗಳ ಸಂಖ್ಯೆ ಕಡಿಮೆಯಾಗಿರುವುದರಿಂದಾಗಿ ಕೊರತೆ ಉಂಟಾಗಿದೆ.ಸ್ಥಳೀಯವಾಗಿ ದೊರೆತರೆ ಸಾಗಾಣಿಕೆ ಸಾಕಷ್ಟು ವೆಚ್ಚ ಉಳಿದು ಬೆಲೆಯಲ್ಲಿ ಕೊಂಚ ಕಡಿಮೆಯಾಗುತ್ತದೆ, ಆದರೆ ದೂರದ ಸ್ಥಳಗಳಾದ ತಿಪಟೂರ, ಚಿತ್ರದುರ್ಗ, ಶಿರಾ, ಅಂಕೋಲಾಗಳಿಂದ ಎಳನೀರು ಕಾಯಿಗಳನ್ನು ತರಿಸುವುದರಿಂದ ಬೆಲೆ ಸಹಜವಾಗಿ ಹೆಚ್ಚಾಗಿದೆ ಎಂದು ವ್ಯಾಪಾರಸ್ಥರು ತಿಳಿಸುತ್ತಾರೆ.ಕಳೆದ ಹತ್ತಾರು ವರ್ಷಗಳಿಂದ ಎಳನೀರು ವ್ಯಾಪಾರ ಮಾಡುತ್ತಾ ಬಂದಿರುವ ಇಲ್ಲಿನ ಮಾಬುಸಾಬ ಬಾಗವಾನ ಎಂಬುವವರು, ನಾನು ಹತ್ತಾರು ವರ್ಷದಿಂದ ಇದೆ ಕೆಲಸ ಮಾಡಿಕೊಂತ ಬಂದೀನಿ, ಕಳೆದೆರಡು ವರ್ಷದ ಹಿಂದೆ ನಮ್ಮ ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಕೃತಕ ತಂಪು ಪಾನೀಯಗಳಿಗೆ ಮರುಳಾಗಿದ್ದರು, ಆದರೆ ಈಗ ಅವರೆಲ್ಲ ಎಳನೀರು ಬರುತ್ತಿರುವುದರಿಂದ ನಮ್ಮ ವ್ಯಾಪಾರ ಕೊಂಚ ಜೋರಾಗಿದೆ ಎಂದು ಹೇಳುತ್ತಾರೆ.ಕ್ಷಣಹೊತ್ತಿನಲ್ಲಿಯೇ ದಾಹ ತೀರಿಸುವ ರಾಸಾಯನಿಕ ತಂಪು ಪಾನೀಯಗಳನ್ನು ಸೇವಿಸುವುದಕ್ಕಿಂತ ದೇಹಕ್ಕೆ ಔಷಧಿಯಾಗಿ ಹಾಗೂ ಆಹಾರವಾಗಿ ಪರಿಣಮಿಸುವ ಎಳನೀರು ಕುಡಿದರೆ ದೇಹ,  ಮನಸ್ಸಿಗೆ ದೊರೆಯುವ ಅಹ್ಲಾದತೆ, ಚೈತನ್ಯವೇ ಬೇರೆ ಎಂದು ಗ್ರಾಹಕ ಶಿವಶಂಕರ ಮೆದಿಕೇರಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.