ನಿತ್ಯಶ್ರೀ ಪತಿ ಆತ್ಮಹತ್ಯೆ

7

ನಿತ್ಯಶ್ರೀ ಪತಿ ಆತ್ಮಹತ್ಯೆ

Published:
Updated:

 


ಚೆನ್ನೈ (ಪಿಟಿಐ): ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದುಷಿ ನಿತ್ಯಶ್ರೀ ಅವರ ಪತಿ ಮಹದೇವನ್ ಅವರು ಬುಧವಾರ ಇಲ್ಲಿನ ಅಡ್ಯಾರ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

45 ವರ್ಷದ ಮಹದೇವನ್ ಅವರು ಕೊಟ್ಟರ್‌ಪುರಂ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

 

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ನಿತ್ಯಶ್ರೀ ಬಹು ದೊಡ್ಡ ಹೆಸರು. ಖ್ಯಾತನಾಮರಾದ ಎಂ.ಎಸ್.ಸುಬ್ಬುಲಕ್ಷ್ಮಿ, ಎಂ.ಎಲ್.ವಸಂತಕುಮಾರಿ ಅವರ ಸಮಕಾಲೀನರಲ್ಲೊಬ್ಬರಾದ ಡಿ.ಕೆ.ಪಟ್ಟಮ್ಮಾಳ್ ಅವರ ಮೊಮ್ಮಗಳು ಇವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry