ನಿತ್ಯಾನಂದ ರಚಿಸಿದ ಟ್ರಸ್ಟ್ ವಿಸರ್ಜನೆ

7

ನಿತ್ಯಾನಂದ ರಚಿಸಿದ ಟ್ರಸ್ಟ್ ವಿಸರ್ಜನೆ

Published:
Updated:

ಮದುರೆ (ಪಿಟಿಐ): ನಿತ್ಯಾನಂದ ಸ್ವಾಮಿಯೊಂದಿಗೆ ಜಂಟಿಯಾಗಿ ರಚಿಸಿದ್ದ `ಮದುರೆ ಅಧೀನಂ ಟ್ರಸ್ಟ್~ ಅನ್ನು ವಿಸರ್ಜಿಸಲಾಗಿದೆ ಎಂದು ಶೈವ ಮಠದ ಹಿರಿಯ ಸ್ವಾಮೀಜಿ ಭಾನುವಾರ ತಿಳಿಸಿದ್ದಾರೆ.ತನ್ನ ಪರವಾನಗಿ ಇಲ್ಲದೆಯೇ ಈ ಟ್ರಸ್ಟ್ ರಚಿಸಲಾಗಿದೆ ಎಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಪ್ರಧಾನ ಉಪ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇದನ್ನು ವಿಸರ್ಜಿಸಲಾಗಿದೆ ಎಂದು ಮಠದ ಸ್ವಾಮೀಜಿ ಅರುಣಗಿರಿನಾಥ ಸುದ್ದಿಗಾರರಿಗೆ ತಿಳಿಸಿದ್ದಾರೆ.`ನಿತ್ಯಾನಂದ ಸ್ವಾಮಿಯನ್ನು ಪದಚ್ಯುತಿಗೊಳಿಸುವ ಮೂಲಕ ಮಠದ ಪ್ರತಿಷ್ಠೆ ಹಾಗೂ ಘನತೆಯನ್ನು ಕಾಪಾಡಲಾಗಿದೆ. ಇನ್ನು ಮುಂದೆ ಜಂಟಿ ಟ್ರಸ್ಟ್ ಮುಂದುವರಿಸುವ ಅಗತ್ಯ ಇಲ್ಲ~ ಎಂದು ನುಡಿದಿದ್ದಾರೆ.`ನಿತ್ಯಾನಂದ ಸ್ವಾಮಿ ನನ್ನನ್ನು ಪದಚ್ಯುತಿಗೊಳಿಸಲು ಸಾಧ್ಯವಿಲ್ಲ~ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ. `ಮಠದಲ್ಲಿ ನಿತ್ಯಾನಂದ ಆರಂಭಿಸಿದ್ದ ಸಂಪ್ರದಾಯಗಳನ್ನು ನಿಲ್ಲಿಸಲಾಗಿದೆ. ಆತನಿಗೆ ಸೇರಿದ ವಸ್ತುಗಳನ್ನು ಹೊರ ಹಾಕಲಾಗಿದೆ ಮತ್ತು ಆತನ ಶಿಷ್ಯೆಯರಿಗೆ ಮಠ ಬಿಟ್ಟು ಹೋಗುವಂತೆ ತಾಕೀತು ಮಾಡಲಾಗಿದೆ~ ಎಂದೂ ಅವರು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry