ನಿತ್ಯ 6000 ಮಂದಿ ಭೇಟಿ...ಗಿಜಿಗುಡುವ ಜಾಗ

ಬುಧವಾರ, ಮೇ 22, 2019
24 °C

ನಿತ್ಯ 6000 ಮಂದಿ ಭೇಟಿ...ಗಿಜಿಗುಡುವ ಜಾಗ

Published:
Updated:

ನವದೆಹಲಿ (ಐಎಎನ್‌ಎಸ್): ಬುಧವಾರ ಬಾಂಬ್ ಸ್ಫೋಟಕ್ಕೆ ಗುರಿಯಾದ ಇಲ್ಲಿನ ಹೈಕೋರ್ಟ್ 4.57 ಎಕರೆ ಪ್ರದೇಶ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು, ಪ್ರತಿನಿತ್ಯ ಕನಿಷ್ಠ 6000 ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಪ್ರತಿ ಬುಧವಾರದಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಕೂಡ ನಡೆಯುವುದರಿಂದ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುತ್ತದೆ.7000 ವಕೀಲರ ಕೊಠಡಿಗಳು ಈ ಸಮುಚ್ಚಯದಲ್ಲಿದ್ದು, ನಿತ್ಯ ಕನಿಷ್ಠ 3500 ವಕೀಲರು ಭೇಟಿ ನೀಡುತ್ತಾರೆ. ಇಲ್ಲಿರುವ ಒಟ್ಟು ನ್ಯಾಯಾಲಯಗಳ ಸಂಖ್ಯೆ 40ಕ್ಕೂ ಹೆಚ್ಚು. ಜತೆಗೆ, 10 ರಾಜಿ ಸಂಧಾನ ಕೊಠಡಿಗಳೂ ಇವೆ. ಪ್ರತಿದಿನ ಇಲ್ಲಿಗೆ ಭೇಟಿ ನೀಡುವ ಕಕ್ಷಿದಾರರ ಸಂಖ್ಯೆ 2000ಕ್ಕೂ ಹೆಚ್ಚಿದ್ದರೆ ನ್ಯಾಯಾಲಯದ ಗುಮಾಸ್ತರು ಹಾಗೂ ಅಧಿಕಾರಿಗಳ ಸಂಖ್ಯೆ 600ಕ್ಕೂ ಹೆಚ್ಚು.ನ್ಯಾಯಾಲಯದ ಸುತ್ತ ಒಂಬತ್ತು ಗೇಟ್‌ಗಳಿವೆ. ಆದರೆ ಮೇ 25ರಂದು ಇಲ್ಲಿ ಸ್ಫೋಟ ಸಂಭವಿಸಿದ ನಂತರ 5 ಮತ್ತು 7ನೇ ಗೇಟ್‌ಗಳ ಮೂಲಕ ಮಾತ್ರ ಕಕ್ಷಿದಾರರನ್ನು ಒಳಗೆ ಬಿಡಲಾಗುತ್ತಿದೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry