ಮಂಗಳವಾರ, ಮೇ 18, 2021
28 °C

ನಿತ್ರಾಣಗೊಂಡಿದ್ದ ಆನೆ ಮರಿಗೆ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ: ತೀವ್ರ ಭೇದಿಯಿಂದ ಬಳಲಿದ ಕಾಡಾನೆ ಮರಿಯೊಂದು ಗುರುವಾರ ನಸುಕಿನಲ್ಲಿ ತಾಲ್ಲೂಕಿನ ಮೇಟಿಕುಪ್ಪೆ ಗ್ರಾಮದ ಜಮೀನಿನಲ್ಲಿ ನಿತ್ರಾಣಗೊಂಡು ಬಿದ್ದಿತ್ತು. ಸಕಾಲಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶುವೈದ್ಯರು ಚಿಕಿತ್ಸೆ ನೀಡಿದ ನಂತರ ಅದು ಚೇತರಿಸಿಕೊಂಡಿತು.ವೆುೀಟಿಕುಪ್ಪೆ ಗ್ರಾಮದ ರೈತ ಗುರುಸ್ವಾಮಿ ಅವರ ಜಮೀನಿನಲ್ಲಿ ಈ ಆನೆ ಮಲಗಿತ್ತು. ಇದರ ಜೊತೆಗೆ ಬಂದಿದ್ದ ಇನ್ನೂ ಮೂರು ಆನೆಗಳು ಕಾಡಿನತ್ತ ಮರಳಿವೆ. ನಿತ್ರಾಣಗೊಂಡು ಬಿದ್ದಿದ್ದ ಆನೆ ಮರಿಯನ್ನು ಕಂಡ ರೈತ ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದರು. ಪಶು ವೈದ್ಯರ ಸಮೇತ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗೆ ಗ್ಲೂಕೋಸ್ ನೀಡಿದರು.ಕಾಡಿನಲ್ಲಿ ಈಗ ಆಹಾರ ಸಿಗದೆ ಬಳಲಿದ್ದ 4 ಆನೆಗಳು ಆಹಾರ ಹುಡುಕುತ್ತ ಗ್ರಾಮದತ್ತ ಬಂದಿದ್ದವು. ಈ ಗುಂಪಿನಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ 2 ವರ್ಷದ ಆನೆ ಮರಿ ನಡೆಯಲಾಗದೇ ಜಮೀನಿನಲ್ಲೇ ಬಿದ್ದುಕೊಂಡಿತ್ತು.ಪಶುವೈದ್ಯ ಡಾ.ವೆಂಕಟರಾಮು ಅವರು ಆನೆಗೆ ಚಿಕಿತ್ಸೆ ನೀಡಿದರು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಮೇಲೆತ್ತಿ ನಿಲ್ಲಿಸಲು ಯತ್ನಿಸಿದರು. ಆದರೂ ಎರಡು ಹೆಜ್ಜೆ ನಡೆಯುವಷ್ಟರಲ್ಲೇ ಆನೆ ಮತ್ತೆ ಬೀಳುತ್ತಿತ್ತು.ಆನೆ ತುಂಬ ಬಳಲಿದ್ದರಿಂದ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಡಾ.ವೆಂಕಟರಾಮು `ಪ್ರಜಾವಾಣಿ~ಗೆ ತಿಳಿಸಿದರು.ಕೆಲ ಸಮಯದ ನಂತರ ಮೇಲೆದ್ದ ಆನೆ ಮರಿ ಕುಂಟುತ್ತಲೇ ಸಾಗಿತು. ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಸೋತೋಷ್‌ನಾಯಕ್‌ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.