ನಿದ್ದೆಗೆಡಿಸಿದ ಸುಂದರಿ...

7

ನಿದ್ದೆಗೆಡಿಸಿದ ಸುಂದರಿ...

Published:
Updated:
ನಿದ್ದೆಗೆಡಿಸಿದ ಸುಂದರಿ...

ಒಂದು ಕಾಲದಲ್ಲಿ ಸಿನಿಮಾಪ್ರಿಯರ ಎದೆ ಬೆಚ್ಚಗಾಗುವಂತ ನೃತ್ಯ ಪ್ರದರ್ಶಿಸುತ್ತಿದ್ದ ಸಿಲ್ಕ್ ಸ್ಮಿತಾಳ ಕಥೆ ಆಧರಿಸಿದ `ಡರ್ಟಿ ಪಿಕ್ಚರ್~ನ ಸ್ಟಿಲ್‌ಗಳನ್ನು ನೋಡಿಯೇ ನಾಯಕಿ ನಟಿ ವಿದ್ಯಾ ಬಾಲನ್‌ಗೆ ಅಭಿಮಾನಿಗಳು ಹೆಚ್ಚಿದ್ದಾರೆ. ಚಿತ್ರದಲ್ಲಿ ಆಕೆ ತುಂಡುಡುಗೆ ತೊಟ್ಟು, ಧಾರಾಳವಾಗಿ ದೇಹಸಿರಿ  ಪ್ರದರ್ಶಿಸಿರುವ ಪರಿಗೆ ಅಭಿಮಾನಿಗಳೆಲ್ಲರೂ ನಿದ್ದೆಗೆಟ್ಟಿದ್ದಾರೆ.ಹೀಗಾಗಿಯೇ ಕೃಷ್ಣಸುಂದರಿ ವಿದ್ಯಾ ಬಾಲನ್ ಹೋದಲ್ಲೆಲ್ಲಾ ಈಗ ಅಭಿಮಾನಿಗಳ ದಂಡು. ಅವರಿಂದ ರಕ್ಷಣೆ ಪಡೆಯುವ ಸಲುವಾಗಿಯೇ ಆಕೆ ಈಗ ನಾಲ್ವರು ಕಟ್ಟುಮಸ್ತಾದ ಅಂಗರಕ್ಷಕರನ್ನು ನೇಮಿಸಿಕೊಂಡಿದ್ದಾರೆ. ಈಚೆಗೆ ಈ ಹೊಸ ಚಿತ್ರ `ದಿ ಡರ್ಟಿ ಪಿಕ್ಚರ್~ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದ ವಿದ್ಯಾ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡರು.`ನಾನು ಈವರೆಗೆ ನಟಿಸಿರುವ ಪಾತ್ರಗಳೆಲ್ಲವೂ ಭಿನ್ನವಾದವು. ಡರ್ಟಿ ಪಿಚ್ಚರ್ ಕೂಡ ವಿಭಿನ್ನವಾದುದು. ಈ ಚಿತ್ರವನ್ನು ಒಪ್ಪಿಕೊಳ್ಳುವ ಮುನ್ನ ಸಾಕಷ್ಟು ಯೋಚನೆ ಮಾಡಿದೆ. ಏಕೆಂದರೆ ಇದು ಖ್ಯಾತ ನಟಿ, ಡ್ಯಾನ್ಸರ್ ಸಿಲ್ಕ್ ಸ್ಮಿತಾ ಅವರ ಜೀವನವನ್ನು ಆಧರಿಸಿದ್ದು. ಆಕೆಯ ವ್ಯಕ್ತಿತ್ವಕ್ಕೆ ಜೀವ ತುಂಬುವುದು ಸವಾಲಿನ ಕೆಲಸವಾಗಿತ್ತು. ಆದರೆ ಚಿತ್ರೀಕರಣ ಮುಕ್ತಾಯಗೊಂಡ ನಂತರ ನನ್ನ ಅಭಿನಯದ ಬಗ್ಗೆ ಎಲ್ಲರೂ ಮೆಚ್ಚುಗೆ ಮಾತುಗಳನ್ನು ಆಡಿದರು. ಇದರಿಂದ ಹೆಚ್ಚು ಖುಷಿಯಾಗಿದೆ~ ಎನ್ನುತ್ತಾರೆ.`ಉದ್ದಕ್ಕೂ ಕಣ್ಣು ಕುಕ್ಕುವ ಬಣ್ಣಗಳ ಪ್ರದರ್ಶನದ ಜತೆಗೆ ಬಪ್ಪಿ ಲಹರಿ ಅವರ ಉ ಲಾ ಲಾ ಹಾಡಿನಿಂದ ದಿ ಡರ್ಟಿ ಪಿಕ್ಚರ್ ಈಗಾಗಲೇ ಎಲ್ಲ ಸಿನಿಪ್ರಿಯರ ಮನ ಗೆದ್ದಿದೆ. ಈ ಹಾಡಿಗೆ ಹಾಕಿರುವ ನನ್ನ ಸ್ಟೆಪ್ ಕೂಡ ಜನಪ್ರಿಯಗೊಂಡಿದೆ~ ಎನ್ನುತ್ತಾರೆ ಅವರು.ವಿದ್ಯಾ ಬಾಲನ್‌ಗೆ ಈಗಾಗಲೇ ತಮಿಳು, ತೆಲುಗು ಹಾಗೂ ಮಲೆಯಾಳಂನಿಂದ ಆಫರ್‌ಗಳು ಬರುತ್ತಿವೆಯಂತೆ. ಆದರೆ, ಉತ್ತಮ ಕಥೆ ಇರುವ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ತನ್ನದು ಎನ್ನುತ್ತಾರೆ ಆಕೆ. ಹಾಗಾಗಿ ಸದ್ಯಕ್ಕೆ ಇನ್ನು ದಕ್ಷಿಣ ಭಾರತದ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲವಂತೆ.ಆಕೆಯ ಅಪ್ಪ ಅಮ್ಮನಿಗೂ ಮಗಳು ಮಲೆಯಾಳಂ ಸಿನಿಮಾದಲ್ಲಿ ನಟಿಸಬೇಕು ಎಂದು ತುಂಬಾ ಆಸೆ ಇದೆಯಂತೆ. ಅದಕ್ಕಾಗಿಯೇ ಎಂಬ ಮಲೆಯಾಳಂ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇಷ್ಟಕ್ಕೇ ಅಪ್ಪ ಅಮ್ಮನಿಗೆ ಸಮಾಧಾನ ಆಗಲಿಲ್ಲ. ಸಂಪೂರ್ಣವಾಗಿ ಮಲೆಯಾಳಂ ಸಿನಿಮಾದಲ್ಲಿ ನಟಿಸಬೇಕು ಎಂದು ಒತ್ತಾಯಿಸುತ್ತಿದ್ದಾರಂತೆ.ಡಿಸೆಂಬರ್ 2ರಂದು ತೆರೆಕಾಣಲಿರುವ ದಿ ಡರ್ಟಿ ಪಿಕ್ಚರ್ ಹೀಗಾಗಲೇ ಬಾಲಿವುಡ್‌ನಲ್ಲಿ ಸಂಚಲನ ಹುಟ್ಟಿಸಿದೆ. ಹದಿಹರೆಯದವರನ್ನು ಹುಚ್ಚೆ್ಬಿಸುವ ರೀತಿಯಲ್ಲಿ ಬಿಡುಬೀಸಾಗಿರುವ ನಟಿಸಿರುವ ವಿದ್ಯಾಬಾಲನ್‌ಗೆ ಈ ಚಿತ್ರ ಒಳ್ಳೆ ಬ್ರೇಕ್ ನೀಡುವುದೇ ಎಂದು ಕಾದು ನೋಡಬೇಕು. ಸಿನಿಮಾದ ಬಗ್ಗೆ ಹೇಳಿಕೊಂಡ ವಿದ್ಯಾ ಕೊನೆಯಲ್ಲಿ `ಉ ಲಾ ಲಾ~ ಹಾಡಿಗೆ ಸ್ಟೆಪ್ ಕೂಡ ಹಾಕಿದರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮತ್ತೊಮ್ಮೆ ಸ್ಟೆಪ್ ಹಾಕಿ ಮಾದಕ ನಗೆ ಬೀರುತ್ತ ಕ್ಷಣಾರ್ಧದಲ್ಲಿ ಕಣ್ಮರೆಯಾದರು.  ಜ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry