ಸೋಮವಾರ, ಆಗಸ್ಟ್ 26, 2019
28 °C

ನಿದ್ರೆಯಲ್ಲಿದ್ದ ರೈತನ ಕಾಲು ಕತ್ತರಿಸಿದ ದುಷ್ಕರ್ಮಿಗಳು!

Published:
Updated:

ಸಿಂಧನೂರು: ಹೊಲದಲ್ಲಿ ಮಲಗಿದ್ದ ರೈತನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಆತನ ಕಾಲು ಕಡಿದು ಪರಾರಿಯಾದ ಘಟನೆ ನಗರದ ದೇವರಗುಡಿ ರಸ್ತೆಯಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.ನಾಗರಾಜ ಗೋವಿಂದಪ್ಪ ಉಪ್ಪಾರ ಕಾಲು ಕಳೆದುಕೊಂಡ ರೈತ. ಇವರು ದೇವರಗುಡಿ ರಸ್ತೆಯಲ್ಲಿರುವ ತನ್ನ ಹೊಲದಲ್ಲಿ ರಾತ್ರಿ ಚಾದರ ಹೊದ್ದು ನಿದ್ರಿಸುತ್ತಿದ್ದಾಗ ಅಲ್ಲಿಗೆ ಬಂದ ದುಷ್ಕರ್ಮಿಗಳು ಪಕ್ಕದ ಶೆಡ್‌ನಲ್ಲಿ ಇರಿಸಲಾಗಿದ್ದ ಕೊಡಲಿಯಿಂದ ಆತನ ಬಲಗಾಲು ಕತ್ತರಿಸಿದ್ದಾರೆ.ಹಲ್ಲೆಗೆ ಒಳಗಾಗಿ ತೀವ್ರ ರಕ್ತಸ್ರಾವದಿಂದ ಚೀರಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆತನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ರೈತನನ್ನು ಬಳ್ಳಾರಿ ವಿಮ್ಸ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಗೆ ವೈಯಕ್ತಿಕ ವೈಷಮ್ಯ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ನಗರ ಠಾಣೆ ಪಿಎಸ್‌ಐ ನಿಂಗಪ್ಪ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Post Comments (+)