ನಿಧನ/ ಜಗನ್ನಾಥನ್

7

ನಿಧನ/ ಜಗನ್ನಾಥನ್

Published:
Updated:

ಚೆನ್ನೈ : ಖ್ಯಾತ ತಮಿಳು ಚಿತ್ರ ನಿರ್ದೇಶಕ ಎ.ಜಗನ್ನಾಥನ್ ಅವರು ಭಾನುವಾರ ನಿಧನ ಹೊಂದಿದರು.

ತಿರಪ್ಪುರ್‌ನಲ್ಲಿರುವ ತಮ್ಮ ಪುತ್ರಿಯರನ್ನು ನೋಡಲು ಭಾನುವಾರ ತೆರಳಿದ್ದ ಜಗನ್ನಾಥನ್ ಅವರಿಗೆ ಹಠಾತ್ ಆಗಿ ಉಸಿರುಕಟ್ಟಿದ ಸಮಸ್ಯೆ ಕಂಡು ಬಂತು. 

 

76 ವರ್ಷದ ಜಗನ್ನಾಥನ್ ಅವರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಜಗನ್ನಾಥನ್ ಅವರು 50ಕ್ಕೂ ಅಧಿಕ ತಮಿಳು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಖ್ಯಾತ ನಟ ಎಂಜಿಆರ್, ನಟಿ ಜಯಲಲಿತಾ ನಟಿಸಿದ್ದ ಚಿತ್ರಗಳನ್ನೂ ಅವರು ನಿರ್ದೇಶಿಸಿದ್ದರು.ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ದಿವಂಗತ ಶಿವಾಜಿ ಗಣೇಶನ್, ರಜನಿಕಾಂತ್ ಮತ್ತು ಕಮಲ್ ಹಾಸನ್  ಕೂಡ ಜಗನ್ನಾಥನ್ ನಿರ್ದೇಶಿಸಿರುವ ಚಿತ್ರದಲ್ಲಿ ನಟಿಸಿದ್ದಾರೆ. ಜಗನ್ನಾಥನ್ ನಿಧನಕ್ಕೆ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಸಂತಾಪ ಸೂಚಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry