ನಿಧನ : ಡಾ. ದಯಾನಂದ ಎಸ್. ರಾವ್

7

ನಿಧನ : ಡಾ. ದಯಾನಂದ ಎಸ್. ರಾವ್

Published:
Updated:

ಬೆಂಗಳೂರು: ರೆಮೆಡೆಕ್ಸ್ ಫಾರ್ಮ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಹಾಗೂ ಈಶಾನ್ ಲ್ಯಾಬ್ಸ್ ಮತ್ತು ಸನಿಲ್ ಫಾರ್ಮಸ್ಪು ಟಿಕಲ್ಸ್ ಪ್ರೈವೇಟ್ ಲಿಮಿಟೆಡ್ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಡಾ. ದಯಾನಂದ ಎಸ್. ರಾವ್ (82) ಅವರು ಅನಾರೋಗ್ಯದ ಕಾರಣದಿಂದ ಫೆಬ್ರುವರಿ 21ರಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಆಧ್ಯಾತ್ಮಿಕ ವಿಚಾರಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದ ಡಾ. ದಯಾನಂದ ಎಸ್. ರಾವ್ ಅವರು ಸಚ್ಚಿದಾನಂದ ಪಬ್ಲಿಕೇಷನ್ ಪ್ರಕಾಶನ ಸಂಸ್ಥೆಯ ಮೂಲಕ `ಕೃಷ್ಣಾನುಗಾಮಿ ಚೈತನ್ಯ~, `ಇಷ್ಟ ದೇವತಾ ಸ್ತೋತ್ರ~, `ಶಿರಡಿ ಕ್ಷೇತ್ರ ದರ್ಶನಂ~ ಮುಂತಾದ ಗ್ರಂಥಗಳನ್ನು ಸಂಸ್ಕೃತ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ್ದು, ಇವು ಹಲವಾರು ಭಾಷೆಗಳಿಗೆ ಭಾಷಾಂತರಗೊಂಡಿದೆ. ಹಲವು ಭಕ್ತಿಗೀತೆಗಳ ಧ್ವನಿ ಸುರುಳಿಗಳನ್ನೂ ಅವರು ಹೊರತಂದಿದ್ದರು. ಮೃತರು ಪತ್ನಿ, ಪುತ್ರಿ ಹಾಗೂ ಪುತ್ರರನ್ನು ಅಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry