ಮಂಗಳವಾರ, ಏಪ್ರಿಲ್ 13, 2021
23 °C

ನಿಧನ ವಾರ್ತೆ:ಹಿರಿಯ ಸಮಾಜವಾದಿ ಮೃಣಾಲ್ ಗೋರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ:  ಹಿರಿಯ ಸಮಾಜವಾದಿ ಹಾಗೂ ಜೆಡಿಎಸ್ ನಾಯಕರಾದ ಮೃಣಾಲ್ ಗೋರೆ (84) ಮಂಗಳವಾರ ಹೃದಯ ಸ್ತಂಭನದಿಂದ ನಿಧನರಾದರು.ಥಾಣೆ ಜಿಲ್ಲೆಯ ವಸೈನಲ್ಲಿರುವ ತಮ್ಮ ಪುತ್ರಿಯ ಮನೆಗೆ ಬಂದಿದ್ದ ವೇಳೆ ಅವರು ಕೊನೆಯುಸಿರೆಳೆದರು.1960ರ ದಶಕದಲ್ಲಿ ಬಹುತೇಕ ಎಲ್ಲ ಪ್ರಮುಖ ಮಹಿಳಾ ಪ್ರತಿಭಟನೆಗಳನ್ನು ಆಯೋಜಿಸಿದ್ದ ಅವರು, ಹಣದುಬ್ಬರ, ನೀರಿನ ಕೊರತೆ ಹಾಗೂ ಮತ್ತಿತರ ಸಾಮಾಜಿಕ ವಿಷಯಗಳನ್ನು ಕೈಗೆತ್ತಿಕೊಂಡು ಹೋರಾಟ ನಡೆಸಿದ್ದರು.1940ರ ದಶಕದಲ್ಲಿ ವೈದ್ಯಕೀಯ ಶಿಕ್ಷಣ ತೊರೆದು ರಾಜಕೀಯ ಅಖಾಡಕ್ಕೆ ಇಳಿದ ಅವರು ಸಮಾಜವಾದಿ ತತ್ವದಿಂದ ಪ್ರೇರಿತರಾಗಿ ರಾಷ್ಟ್ರೀಯ ಸೇವಾ ದಳ ಸೇರಿದರು.  ಪತಿ ಕೇಶವ ಗೋರೆ ಅವರೊಂದಿಗೆ ಗೋವಾ ವಿಮೋಚನೆ ಮತ್ತು ಸಂಯುಕ್ತ ಮಹಾರಾಷ್ಟ್ರ ಆಂದೋಲನಗಳಲ್ಲೂ ಭಾಗಿಯಾಗಿದ್ದರು.1970ರ ದಶಕದಲ್ಲಿ ಹಾಗೂ 85ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು 1977ರಲ್ಲಿ ಲೋಕಸಭೆಗೂ ಚುನಾಯಿತರಾಗಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.