ಗುರುವಾರ , ನವೆಂಬರ್ 21, 2019
22 °C

ನಿಧಾನಗತಿ ಬೌಲಿಂಗ್: ರಾಹುಲ್ ದ್ರಾವಿಡ್‌ಗೆ ದಂಡ

Published:
Updated:

ಜೈಪುರ (ಪಿಟಿಐ): ನಿಧಾನಗತಿ ಬೌಲಿಂಗ್‌ಗಾಗಿ ರಾಜಸ್ತಾನ ರಾಯಲ್ಸ್ ತಂಡದ ನಾಯಕ ರಾಹುಲ್ ದ್ರಾವಿಡ್ 10.8 ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗಿದೆ.ಸೋಮವಾರ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ ಇಲ್ಲಿ ನಡೆದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಬೌಲರ್‌ಗಳು ನಿಗದಿತ ಸರಾಸರಿಗಿಂತ ಎರಡು ಓವರ್‌ಗಳಷ್ಟು ಕಡಿಮೆ ಬೌಲಿಂಗ್ ಮಾಡಿದ್ದರು.ಈ ಕುರಿತು ಪ್ರಕಟಣೆ ಹೊರಡಿಸಿರುವ ಐಪಿಎಲ್ ಅಧಿಕಾರಿಗಳು, `ಐಪಿಎಲ್ ಆರನೇ ಆವೃತ್ತಿಯಲ್ಲಿ ದ್ರಾವಿಡ್ ಅವರಿಂದ ಆಗಿರುವ ಮೊದಲ ಪ್ರಮಾದ ಇದಾಗಿರುವ ಕಾರಣ, ಐಪಿಎಲ್‌ನ ನಿಯಮಗಳ ಪ್ರಕಾರ ಅವರಿಗೆ ಈ ದಂಡ ವಿಧಿಸಲಾಗಿದೆ' ಎಂದು ತಿಳಿಸಿದ್ದಾರೆ.ಸೋಮವಾರ ನಡೆದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವು 19 ರನ್‌ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ ಜಯಿಸಿತ್ತು. ರಾಯಲ್ಸ್ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿತ್ತು.

ಪ್ರತಿಕ್ರಿಯಿಸಿ (+)