ನಿಧಿ ಶೇಷಾದ್ರಿ `ರಂಗಾಭಿವಂದನ'

7

ನಿಧಿ ಶೇಷಾದ್ರಿ `ರಂಗಾಭಿವಂದನ'

Published:
Updated:

ಚಿತ್ರಕಲಾ ನೃತ್ಯ ಶಾಲೆಯ ನಿರ್ದೇಶಕರಾದ ನಿಧಿ ಶೇಷಾದ್ರಿ ಸೋಮವಾರ ಭರತನಾಟ್ಯ ರಂಗ ಪ್ರವೇಶ ಮಾಡಲಿದ್ದಾರೆ.ಆಶಾ ಮತ್ತು ಶೇಷಾದ್ರಿ ಅವರ ಪುತ್ರಿ ನಿಧಿ ಶೇಷಾದ್ರಿ. ಆರನೇ ವಯಸ್ಸಿನಿಂದಲೇ ನೃತ್ಯದ ಬಗ್ಗೆ ಒಲವು ಬೆಳೆಸಿಕೊಂಡಿದ್ದ ನಿಧಿಯ ಪ್ರತಿಭೆಯನ್ನು ತಿದ್ದಿ ತೀಡಿದ್ದು ಖ್ಯಾತ ನೃತ್ಯ ಕಲಾವಿದ ಪಿ.ಪ್ರವೀಣ್ ಕುಮಾರ್.ಭರತನಾಟ್ಯದ ಪ್ರಕಾರಗಳಲ್ಲಿ ಒಂದಾದ ಪಂದನಲ್ಲೂರು ಶೈಲಿಯ ನೃತ್ಯದಲ್ಲಿ ನಿಧಿ ನಾಟ್ಯಾಭ್ಯಾಸ ಪ್ರಾರಂಭಿಸಿದರು. ಕಳೆದ ಹತ್ತು ವರ್ಷಗಳಿಂದ ನೃತ್ಯ ಕಲಿಯುತ್ತಿರುವ ಅವರೀಗ ಕುಮಾರನ್ಸ್ ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ವರ್ಷ ಬಹರೇನ್‌ನಲ್ಲಿ ನಡೆದ `ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ' ಸೇರಿದಂತೆ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರವಾದ ಅಗ್ಗಳಿಗೆ ಇವರದ್ದು.ಶ್ರೀಧರ್, ಅನುರಾಧಾ ಶ್ರೀಧರ್, ಪಲ್ಲವಿ, ಅರುಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 6.30

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry