ನಿಧಿ ಸ್ಥಾಪಿಸಲು `ಬ್ರಿಕ್ಸ್' ನಿರ್ಧಾರ

7

ನಿಧಿ ಸ್ಥಾಪಿಸಲು `ಬ್ರಿಕ್ಸ್' ನಿರ್ಧಾರ

Published:
Updated:

ಸೇಂಟ್ ಪೀಟರ್ಸ್‌ಬರ್ಗ್ (ಪಿಟಿಐ): ಆರ್ಥಿಕ ಬೆಳವಣಿಗೆ ಕುಂಠಿತ ಮತ್ತು ಚಲಾವಣೆಯಲ್ಲಿರುವ ನಾಣ್ಯ-ನೋಟುಗಳ ಮೌಲ್ಯ ಕುಸಿತದಂತಹ ಸಮಸ್ಯೆಗೆ ಸಿಲುಕಿರುವ ಭಾರತ ಸೇರಿದಂತೆ ಐದು ದೇಶಗಳ `ಬ್ರಿಕ್ಸ್' ಒಕ್ಕೂಟವು ಸುಮಾರು ಒಂದು ಲಕ್ಷ ಕೋಟಿ (100 ಶತಕೋಟಿ) ಡಾಲರ್ ಮೊತ್ತದ `ಹಣ ಚಲಾವಣೆ ಮೀಸಲು ನಿಧಿ' ಸ್ಥಾಪಿಸಲು ಗುರುವಾರ ನಿರ್ಧರಿಸಿವೆ.ಈ ತೀರ್ಮಾನವು ಅಮೆರಿಕದ ಉತ್ತೇಜಕ ಪ್ಯಾಕೇಜ್‌ಗಳ ವಾಪಸಾತಿ ಕ್ರಮದ ಪರಿಣಾಮಗಳಿಂದ ತಮ್ಮನ್ನು ಪಾರು ಮಾಡಿಕೊಳ್ಳಲು ಈ ರಾಷ್ಟ್ರಗಳಿಗೆ ನೆರವಾಗುವ ನಿರೀಕ್ಷೆಯಿದೆ.ಈ ನಿಧಿಗೆ ಭಾರತ, ರಷ್ಯಾ ಮತ್ತು ಬ್ರೆಜಿಲ್ ತಲಾ 18 ಶತಕೋಟಿ ಡಾಲರ್‌ಗಳನ್ನು, ಚೀನಾ 41 ಶತಕೋಟಿ ಡಾಲರ್‌ಗಳನ್ನು ಹಾಗೂ ದಕ್ಷಿಣ ಆಫ್ರಿಕಾ 5 ಶತಕೋಟಿ ಡಾಲರ್‌ಗಳನ್ನು ಕೊಡುಗೆಯಾಗಿ ನೀಡಲಿವೆ.ಜಿ-20 ಶೃಂಗಸಭೆಗೂ ಪೂರ್ವಭಾವಿಯಾಗಿ ಇಲ್ಲಿ ಔಪಚಾರಿಕ ಸಭೆ ನಡೆಸಿದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ (ಬ್ರಿಕ್ಸ್) ನಾಯಕರು, ಅನಿಶ್ಚಿತ ಮೀಸಲು ವ್ಯವಸ್ಥೆ (ಸಿಆರ್‌ಎ) ಸ್ಥಾಪನೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಣಾ ವಿವರಗಳು ಮತ್ತು ಇತರ ಪ್ರಮುಖ ವಿಷಯಗಳ ಕುರಿತು ಒಮ್ಮತವನ್ನು ಸಾಧಿಸಿರುವುದಾಗಿ ಒಕ್ಕೂಟದ ಮಾಧ್ಯಮ ಪ್ರಕಟಣೆಯೊಂದು ತಿಳಿಸಿದೆ.ಎಚ್ಚರಿಕೆ: ಈ ಮಧ್ಯೆ, ಅಮೆರಿಕದ ಹಣಕಾಸು ಉತ್ತೇಜನ ಪ್ಯಾಕೇಜ್‌ಗಳ ವಾಪಸಾತಿ ಕ್ರಮದ ವಿರುದ್ಧ ಚೀನಾ ಮತ್ತು ರಷ್ಯಾ ಧ್ವನಿ ಎತ್ತಿದ್ದು, ಇದು ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry