ನಿಧಿ ಹಾಡ್ತಾರಂತೆ!

7

ನಿಧಿ ಹಾಡ್ತಾರಂತೆ!

Published:
Updated:

ನಿಧಿ ಸುಬ್ಬಯ್ಯ ಧ್ವನಿಯ ಮಾಧುರ್ಯ ಬಾಲಿವುಡ್ ಸಂಗೀತ ನಿರ್ದೇಶಕರಾದ ಸಾಜಿದ್-ವಾಜಿದ್ ಜೋಡಿಗೆ ಮೋಡಿ ಮಾಡಿದೆಯಂತೆ.ಬಾಲಿವುಡ್‌ನ `ಅಜಬ್ ಗಜಬ್ ಲವ್~ ಚಿತ್ರದಲ್ಲಿ ನಟಿಸುತ್ತಿರುವ ನಿಧಿ ಸುಬ್ಬಯ್ಯ, ಸೆಟ್‌ನಲ್ಲಿ ತಮ್ಮಷ್ಟಕ್ಕೇ ತಾವೇ ಗುನುಗಿಕೊಂಡು ಇರುತ್ತಾರಂತೆ.ಅರ್ಜುನ್ ರಾಮ್‌ಪಾಲ್, ಕಿರಣ್‌ಖೇರ್ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಈ ನಿಧಿ ಗಾನಪ್ರತಿಭೆಯನ್ನು ಎಲ್ಲರೂ ಮೆಚ್ಚಿದ್ದಾರೆ.ಅಷ್ಟೇ ಅಲ್ಲ, ಸಾಜಿದ್ ವಾಜಿದ್ ಇಬ್ಬರೂ ನಿಧಿಗೆ ಹಾಡಿಗಾಗಿ ತರಬೇತಿ ಪಡೆಯಿರಿ ಎಂಬ ಸಲಹೆಯನ್ನೂ ನೀಡಿದ್ದಾರೆ.ಚಿತ್ರೀಕರಣದ ಸಂದರ್ಭದಲ್ಲಿ ಒಂದಲ್ಲ ಒಂದು ವಿಭಾಗದಿಂದ ಪ್ರತಿಯೊಬ್ಬರೂ ಹಾಡಿನದ್ದೊಂದು ಚೀಟಿ ಹಿಡಿದು ನಿಧಿ ಬಳಿ ಬರುತ್ತಿದ್ದರಂತೆ. `ಪ್ಲೀಸ್, ಈ ಹಾಡು ನನಗಾಗಿ ಹಾಡುವೆಯಾ?~ ಎಂಬ ಪ್ರೀತಿಪೂರ್ವಕ ಯಾಚನೆಯೊಂದು ಯಾವತ್ತಿಗೂ ಇದ್ದೇ ಇರುತ್ತಿತ್ತು. ಎಲ್ಲರ ಮೆಚ್ಚುಗೆ ಗಳಿಸಿರುವ ನಿಧಿ ಇದೀಗ ಹಾಡುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರಂತೆ.`ಇಷ್ಟು ದಿನ ಸುಮ್ಮನೆ ಹಾಡುತ್ತಿದ್ದೆ. ಇವರೆಲ್ಲರ ಒತ್ತಾಯ ನೋಡಿದ ಮೇಲೆ ಹಾಡುವುದನ್ನು ಕಲಿಯಬೇಕು. ಒಂದು ದಿನ ನಾನೇ ಹಾಡಬೇಕು ಎಂದೂ ನಿರ್ಧರಿಸಿದ್ದೇನೆ~ ಎಂದೂ ನಿಧಿ ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry