ನಿನ್ನೆ ರಾಮದಾಸ್.. ಇಂದು ಕಾಗೇರಿ..

7

ನಿನ್ನೆ ರಾಮದಾಸ್.. ಇಂದು ಕಾಗೇರಿ..

Published:
Updated:

ಸಚಿವ ಎಸ್.ಎ.ರಾಮದಾಸ್ ಅವರನ್ನು ಸರ್ವಾಧಿಕಾರಿ ಎಂದು ಬಣ್ಣಿಸಿ ಮಂಗಳವಾರ ಗಮನ ಸೆಳೆದ ಬಿಜೆಪಿಯ ಶಂಕರಲಿಂಗೇಗೌಡ ಬುಧವಾರ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ತರಾಟೆಗೆ ತೆಗೆದುಕೊಂಡರು.

`ನಾನು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಒಂದು ತಿಂಗಳ ಸಮಯ ಕೋರಿದ್ದಾರೆ. ಇಂತಹ ನಿಷ್ಪ್ರಯೋಜಕ, ಬೇಜವಾಬ್ದಾರಿ ಶಿಕ್ಷಣ ಸಚಿವರ ವರ್ತನೆ ಸರಿಯಲ್ಲ~ ಎಂದು ಏರುಧ್ವನಿಯಲ್ಲಿ ಆಕ್ಷೇಪಿಸಿದರು. `ಇವರಿಗೆ ಕೀಳರಿಮೆ. ದುರಹಂಕಾರ...~ ಹೀಗೆ ಬೈಗುಳ ಆರಂಭಿಸಿದರು.

ಇತ್ತ ಕಾಗೇರಿ ಸೇರಿದಂತೆ ಎಲ್ಲ ಸಚಿವರೂ ನಗುತ್ತಿದ್ದರೆ, ಅತ್ತ ಪ್ರತಿಪಕ್ಷದ ಸದಸ್ಯರಿಂದ ಶೇಮ್.. ಶೇಮ್... ಎಂಬ ಉದ್ಗಾರ. ಗೌಡರ ಬೈಗುಳದಿಂದ ರೋಮಾಂಚನಗೊಂಡ ಪ್ರತಿಪಕ್ಷ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.

ಕೊನೆಗೆ ಕಾಗೇರಿ ಮಾತನಾಡಿ, `ಚಾಮರಾಜನಗರದ ಕ್ಷೇತ್ರದ ಶಾಸಕ ಶಂಕರಲಿಂಗೇಗೌಡ ಮತ್ತು ನಾನು ಇಬ್ಬರೂ ಒಳ್ಳೆಯ ಸ್ನೇಹಿತರು....~ ಎಂದು ಹೇಳುತ್ತಿದ್ದಂತೆ ಮತ್ತೆ ಆಕ್ಷೇಪ ಎತ್ತಿದ ಗೌಡರು `ನನ್ನ ಕ್ಷೇತ್ರದ ಹೆಸರು ಚಾಮರಾಜನಗರ ಅಲ್ಲ; `ಚಾಮರಾಜ~. ಕ್ಷೇತ್ರದ ಹೆಸರು ತಿಳಿಯದವರೆಲ್ಲ ಮಂತ್ರಿಗಳು~ ಎಂದು ಮತ್ತೆ ಕಿಚಾಯಿಸಿದರು.

`ಕಂಪ್ಯೂಟರ್ ಯುಗದಲ್ಲಿ ತಿಂಗಳು ಏಕೆ ಬೇಕು~ ಎಂದು ಗೌಡರು ಮತ್ತೆ ಆಕ್ಷೇಪಿಸಿದರು. ಕೊನೆಗೆ ಉಪಸಭಾಧ್ಯಕ್ಷ ಯೋಗೀಶ್ ಭಟ್ ಅವರು 15 ದಿನದಲ್ಲಿ ಉತ್ತರ ಒದಗಿಸುವಂತೆ ಸಚಿವರಿಗೆ ಸೂಚಿಸಿ, ವಿಷಯವನ್ನು ಸಮಾಪ್ತಿಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry