ನಿಫ್ಟಿ ಕುಸಿತ-ಸಿಬಿಐ ತನಿಖೆಗೆ ಆಗ್ರಹ

7

ನಿಫ್ಟಿ ಕುಸಿತ-ಸಿಬಿಐ ತನಿಖೆಗೆ ಆಗ್ರಹ

Published:
Updated:

ಮುಂಬೈ (ಪಿಟಿಐ): ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ದಿಢೀರನೆ 900 ಅಂಶಗಳಷ್ಟು ಕುಸಿದ ಕುರಿತು `ಸಿಬಿಐ~ ತನಿಖೆ ನಡೆಸಬೇಕು ಎಂದು `ಎನ್‌ಸಿಪಿ~ ಆಗ್ರಹಿಸಿದೆ. ಎಂಕೆ ಗ್ಲೋಬಲ್ಸ್ ಎನ್ನುವ ಷೇರು ದಲ್ಲಾಳಿ ಸಂಸ್ಥೆ ರೂ650 ಕೋಟಿ ಮೊತ್ತದ ದೋಷಪೂರಿತ ವಹಿವಾಟು ದಾಖಲಿಸಿದ ಕಾರಣ `ನಿಫ್ಟಿ~ ದಿಢೀರನೆ ಕುಸಿದಿತ್ತು. ಇದರಿಂದ 15 ನಿಮಿಷಗಳಷ್ಟು ಕಾಲ ವಹಿವಾಟು ಸ್ಥಗಿತಗೊಂಡಿತ್ತು. ಹೂಡಿಕೆದಾರರ 10 ಲಕ್ಷ ಕೋಟಿಗಳಷ್ಟು ಸಂಪತ್ತು ಕ್ಷಣಾರ್ಧದಲ್ಲಿ ಕರಗಿ ಹೋಗಿತ್ತು.  ಈ ಅಕ್ರಮ ವಹಿವಾಟಿನ ಹಿಂದಿರುವ ರಹಸ್ಯ ಪತ್ತೆ ಹಚ್ಚಲು `ಸಿಬಿಐ~ ತನಿಖೆ ನಡೆಸಬೇಕು ಎಂದು `ಎನ್‌ಸಿಪಿ~ ವಕ್ತಾರ ನವಾಬ್ ಮಲಿಕ್ ಆಗ್ರಹಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry