ನಿಮಿಷಾಂಬ ದೇವಸ್ಥಾನದಲ್ಲಿ ಕನ್ನಡಿಗನ ಕೈಹಿಡಿದ ಫಿಲಿಪ್ಪೀನ್ಸ್ ಯುವತಿ

7

ನಿಮಿಷಾಂಬ ದೇವಸ್ಥಾನದಲ್ಲಿ ಕನ್ನಡಿಗನ ಕೈಹಿಡಿದ ಫಿಲಿಪ್ಪೀನ್ಸ್ ಯುವತಿ

Published:
Updated:
ನಿಮಿಷಾಂಬ ದೇವಸ್ಥಾನದಲ್ಲಿ ಕನ್ನಡಿಗನ ಕೈಹಿಡಿದ ಫಿಲಿಪ್ಪೀನ್ಸ್ ಯುವತಿ

ಶ್ರೀರಂಗಪಟ್ಟಣ: ಪಟ್ಟಣದ ಹೊರವಲಯದಲ್ಲಿರುವ ನಿಮಿಷಾಂಬ ದೇವಾಲಯದಲ್ಲಿ ಗುರುವಾರ ಫಿಲಿಪ್ಪೀನ್ಸ್ ದೇಶದ ಯುವತಿ ಹಾಗೂ ಭಾರತದ ಯುವಕ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ದಾವಣಗೆರೆ ಜಿಲ್ಲೆ ಹರಿಹರದ ರಘು ಹಾಗೂ ಫಿಲಿಪ್ಪೀನ್ಸ್ ದೇಶದ ಯುವತಿ ಫಾಲಿನ್‌ಜೇನ್ ಸತಿ ಪತಿಗಳಾದವರು.

ನೂತನ ವಧು-ವರರು ದೇವಾಲಯದಲ್ಲಿ ಸಂಕಲ್ಪ, ತಾಳಿ, ಉಂಗುರ ಧಾರಣೆಯ ನಂತರ ಅರಳಿಕಟ್ಟೆ ಸುತ್ತ ಪ್ರದಕ್ಷಿಣೆ ಹಾಕಿದರು.

ಸಿಂಗಾಪುರದ ಗ್ಲೋಬಲ್ ಪೌಂಢೇಶನ್‌ನ ಎಸ್.ಟಿ ಮೈಕ್ರೋ ಎಲೆಕ್ಟ್ರಾನಿಕ್ ಕಂಪೆನಿಯಲ್ಲಿ ರಘು ಅಸಿಸ್ಟೆಂಟ್ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದೇ ಕಂಪನಿಯಲ್ಲಿ ಫಾಲಿನ್‌ಜೇನ್ ಪ್ರಾಜೆಕ್ಟ್ ಎಂಜಿನಿಯರ್ ಆಗಿದ್ದಾರೆ. ಇವರಿಬ್ಬರ ನಡುವೆ ವರ್ಷದ ಹಿಂದೆ ಪ್ರೇಮಾಂಕುರವಾಗಿತ್ತು.

`ಫಾಲಿನ್‌ಜೇನ್ ಪೋಷಕರ ಅನುಮತಿ ಪಡೆಯಲಾಗಿದೆ. ನನ್ನ ಪೋಷಕರೂ ಒಪ್ಪಿಗೆ ನೀಡಿದ್ದಾರೆ. ಈಗ ಹಿಂದೂ ಸಂಪ್ರದಾಯದಂತೆ ಇಲ್ಲಿ ಮದುವೆಯಾಗುತ್ತಿದ್ದೇವೆ. ಫಿಲಿಪ್ಪೀನ್ಸ್‌ಗೆ ಮರಳಿದ ಮೇಲೆ ಅಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ಮಾಡಿಕೊಳ್ಳಲಿದ್ದೇವೆ~ ಎಂದು ರಘು ತಿಳಿಸಿದರು.

ಸಿಂಗಾಪುರದ ಗ್ಲೋಬಲ್ ಪೌಂಢೇಶನ್‌ನ ಎಸ್.ಟಿ ಮೈಕ್ರೋ ಎಲೆಕ್ಟ್ರಾನಿಕ್ ಕಂಪೆನಿಯ ಅಸಿಸ್ಟೆಂಟ್ ಎಂಜಿನಿಯರ್ ರಘು  ಅದೇ ಕಂಪನಿಯ ಪ್ರಾಜೆಕ್ಟ್ ಎಂಜಿನಿಯರ್ ಫಾಲಿನ್‌ಜೇನ್ ಅವರ ನಡುವೆ ವರ್ಷದ ಹಿಂದೆ ಪ್ರೇಮಾಂಕುರವಾಗಿತ್ತು...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry