ಸೋಮವಾರ, ಜೂನ್ 14, 2021
22 °C

ನಿಮಿಷಾಂಬ ದೇವಾಲಯ ಅಭಿವೃದ್ಧಿಗೆ ನೀಲನಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ:  ಇಲ್ಲಿಗೆ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯವನ್ನು ರೂ. 2 ಕೋಟಿ ವೆಚ್ಚದಲ್ಲಿ ವಿಸ್ತರಿಸುವ ಕಾರ್ಯದ ನೀಲನಕ್ಷೆ ತಯಾರಾಗಿದ್ದು,  ಒಂದೆರಡು ತಿಂಗಳಲ್ಲಿ ಉದ್ದೇಶಿತ ಕಾಮಗಾರಿ ಶುರುವಾಗಲಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಶಿವಲಿಂಗೇಗೌಡ ತಿಳಿಸಿದರು.  ದೇಗುಲದ ಒಳ ಪ್ರಾಂಗಣವನ್ನು ಮೂರು ದಿಕ್ಕುಗಳಲ್ಲಿ ತಲಾ 10 ಅಡಿಗಳಷ್ಟು ವಿಸ್ತರಿಸಲಾಗುವುದು. ಗೋಪುರದ ಭಾಗ ಹೊರತುಪಡಿಸಿ ಉಳಿದ ಕಡೆ 30 ಅಡಿಗಳಷ್ಟು ದೇವಾಲಯ ವಿಸ್ತರಣೆಗೊಳ್ಳಲಿದೆ. ಅದಕ್ಕೆ ಬೇಕಾದ ಸಿದ್ಧತೆ ಪೂರ್ಣಗೊಂಡಿದೆ. ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ಹಸಿರು ನಿಶಾನೆ ಸಿಕ್ಕ ಕೂಡಲೇ ಕಾಮಗಾರಿ ಆರಂಭವಾಗಲಿದೆ. ನದಿ ತೀರದ ಸೋಪಾನಕಟ್ಟೆ ಕೂಡ ಅಭಿವೃದ್ಧಿಯಾಗಲಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸ್ನಾನ ಮತ್ತು ಶೌಚಗೃಹಗಳು ನಿರ್ಮಾಣಗೊಳ್ಳಲಿವೆ. 48.5 ಲಕ್ಷ ವೆಚ್ಚದ ಕಾಮಗಾರಿಗೆ ಅನುಮತಿ ಸಿಕ್ಕಿದೆ ಎಂದು ಶನಿವಾರ ಸ್ಥಳ ಪರಿಶೀಲನೆ ವೇಳೆ ವಿವರಿಸಿದರು. ದೇವಾಲಯ ಹಿಂಭಾಗದಲ್ಲಿ ದಾಸೋಹ ಭವನ ನಿರ್ಮಿಸಲು ಯೋಜನೆ ಸಿದ್ಧವಾಗಿದೆ. ಯಾತ್ರಾರ್ಥಿಗಳು ಉಳಿದುಕೊಳ್ಳಲು 20 ಕೊಠಡಿಗಳು ಹಾಗೂ ವಿಐಪಿ ಗೆಸ್ಟ್‌ಹೌಸ್ ನಿರ್ಮಿಸಲು ಉದ್ದೇಶಿಸಲಾಗಿದೆ. ದೇವಾಲಯದ ಮುಂದಿನ 39 ಗುಂಟೆ ಜಾಗ (ಸ.ನಂ.900 ಮತ್ತು 904) ಈಗ ದೇವಾಲಯದ ಸುಪರ್ದಿಗೆ ಬಂದಿದೆ. ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು. ಭಕ್ತರಿಗೆ ದೇವರ ದರ್ಶನ, ಪೂಜೆ ಇತರ ಕಾರ್ಯಗಳಿಗೆ ತೊಡಕಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗವುದು ಎಂದರು. ಮಹಾಬಲೇಶ್ವರ ಕೆ.ಭಟ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.