ಭಾನುವಾರ, ಮೇ 29, 2022
22 °C

ನಿಮ್ಮ ಹೃದಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುನಂದ,ಬೆಂಗಳೂರು.

ಹೃದಯಾಘಾತವಾದ ನಂತರ ಸಾಮಾನ್ಯವಾಗಿ ಮಾತ್ರೆಗಳನ್ನು ಎಷ್ಟು ದಿನ ಸೇವಿಸಬೇಕು?

ಹೃದಯ ಸಂಬಂಧಪಟ್ಟ ಕಾಯಿಲೆಗೆ ಆಂಜಿಯೋಪ್ಲಾಸ್ಟಿ / ಬೈಪಾಸ್ ಶಸ್ತ್ರಚಿಕಿತ್ಸೆ ಆಗಿರಲಿ ಈ ಕೆಳಕಂಡ ಮಾತ್ರೆಗಳನ್ನು ಜೀವನಪರ್ಯಂತ ಸೇವಿಸಬೇಕು.1.ಆಸ್ಪಿರಿನ್2.ಕ್ಲೋಪಿಡೋಗ್ರಿಲ್3.ಅಟೋರ್ವಸ್ಟಾಟಿನ್ / ರೋಸುವಸ್ಟಾಟಿನ್‌ಎಷ್ಟೋ ಬಾರಿ ನಾವು ಕೊಲೆಸ್ಟ್ರಾಲ್ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಅದರ ಮಟ್ಟ ನಾರ್ಮಲ್ ಎಂದು ಗೊತ್ತಾದ ಮೇಲೆ, ಎಷ್ಟೋ ಜನ ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿ ಬಿಡುತ್ತಾರೆ.ಸಂಪೂರ್ಣವಾಗಿ ನಿಲ್ಲಿಸಬಾರದು,  ಆದರೆ ಮಾತ್ರೆ ಡೋಸ್ ಅನ್ನು ಮಾತ್ರ ಕಡಿಮೆ ಮಾಡಬಹುದು. ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಕೊಲೆಸ್ಟ್ರಾಲ್ ನಾರ್ಮಲ್ ಇದ್ದರೂ ಕೂಡ ಮಾತ್ರೆಯನ್ನು ಸದಾ ತೆಗೆದುಕೊಳ್ಳಲೇಬೇಕು.  ಸುಪ್ರಿಯಾ, ಮಂಗಳೂರು.

ಆಂಜಿಯೋಪ್ಲಾಸ್ಟಿ ಮತ್ತು ಬೈಪಾಸ್ ಶಸ್ತ್ರಚಿಕಿತ್ಸೆ ಯಾವ ಸಂದರ್ಭದಲ್ಲಿ ಮಾಡಿಸಿಕೊಳ್ಳಬೇಕು?

ಆಂಜಿಯೋಪ್ಲಾಸ್ಟಿ ಎಂದರೆ ಕಿರಿದಾದ ಕರೋನರಿ ರಕ್ತನಾಳಗಳನ್ನು ಬಲೂನ್‌ನಿಂದ ಹಿಗ್ಗಿಸಿ ಸ್ಟೆಂಟ್‌ಅನ್ನು ಆಳವಡಿಸಲಾಗುವುದು.  ಒಂದು ಅಥವಾ 2 ರಕ್ತ ನಾಳಗಳಲ್ಲಿ ತೊಂದರೆ ಕಂಡುಬಂದಲ್ಲಿ, ಸಾಮಾನ್ಯವಾಗಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ಮಾಡಲಾಗುತ್ತದೆ.3 ಅಥವಾ 4 ರಕ್ತನಾಳಗಳಲ್ಲಿ ತೊಂದರೆ ಕಂಡುಬಂದಂತಹ ಸಂದರ್ಭದಲ್ಲಿ (ಮಲ್ಟಿಪಲ್ ಬ್ಲಾಕೇಜಸ್) ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಈ ಬೈಪಾಸ್ ಶಸ್ತ್ರಚಿಕಿತ್ಸೆಯಲ್ಲಿ ರೋಗಿಯ ಎದೆಯ ಗೂಡು, ಕೈ ಅಥವಾ ಕಾಲಿನಲ್ಲಿ ಇರತಕ್ಕಂತಹ ರಕ್ತನಾಳಗಳನ್ನು ಹೃದಯದ ರಕ್ತನಾಳಗಳಿಗೆ ಜೋಡಿಸಲಾಗುತ್ತದೆ.ನಿಮ್ಮ ಹೃದಯ


ನಿಮ್ಮ ಹೃದಯದ ತೊಂದರೆಗಳೇನು? ನಿಮ್ಮ ಸಮಸ್ಯೆ ಹಾಗೂ ಪ್ರಶ್ನೆಗಳನ್ನು ಬರೆದು ಕಳುಹಿಸಬೇಕಾದ ವಿಳಾಸ- ಸಂಪಾದಕರು, ಭೂಮಿಕಾ, ಪ್ರಜಾವಾಣಿ, 75, ಎಂ.ಜಿ.ರಸ್ತೆ, ಬೆಂಗಳೂರು 560001

ಇಮೇಲ್ - bhoomika@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.