ಬುಧವಾರ, ಮೇ 25, 2022
31 °C

ನಿಯಮಬಾಹಿರ ಹಣ ಮಂಜೂರು: ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸಂಸ್ಕೃತಿ ಇಲಾಖೆಯ ಕೆಲವು ಅಧಿಕಾರಿಗಳು ಸರ್ಕಾರದ ಅನುದಾನವನ್ನು ನಿಯಮಬಾಹಿರವಾಗಿ ಕಲಾ ತಂಡಗಳಿಗೆ ಮಂಜೂರು ಮಾಡಿದ ಆರೋಪಕ್ಕೆ ಸಿಲುಕಿದ್ದಾರೆ.ಈ ಅಧಿಕಾರಿಗಳು, ತಜ್ಞರ ಸಮಿತಿಯ ಶಿಫಾರಸಿಗೆ ವ್ಯತಿರಿಕ್ತವಾಗಿ ಹಣವನ್ನು ಒಡಿಶಾದ ವೃತ್ತಿಪರ ತಂಡಗಳು ಮತ್ತು ಕಲಾವಿದರಿಗೆ ಮಂಜೂರು ಮಾಡಿದ್ದಾರೆ. ಇದಕ್ಕಾಗಿ ತಜ್ಞರ ಸಮಿತಿ ನೀಡಿದ್ದ ಶಿಫಾರಸುಗಳುಳ್ಳ ವರದಿಯನ್ನೇ ತಿರುಚಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ಹೇಳಿದೆ.ಈಗ ಸಚಿವಾಲಯವು ಈ ಕುರಿತು ತನಿಖೆ ನಡೆಸಲು ಪೊಲೀಸರನ್ನು ಕೋರಿದೆ. ಈ ಸಂಬಂಧ ಶಂಕಿತ ಅಧಿಕಾರಿಗಳ ವಿರುದ್ಧ ಮೋಸ ಹಾಗೂ ನಕಲಿ ಸಹಿ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.