ನಿಯಮಿತ ಆರೋಗ್ಯ ತಪಾಸಣೆಗೆ ಸಲಹೆ

7

ನಿಯಮಿತ ಆರೋಗ್ಯ ತಪಾಸಣೆಗೆ ಸಲಹೆ

Published:
Updated:

ರಾಜರಾಜೇಶ್ವರಿನಗರ:  `ಜನರು ಕಾಯಿಲೆಗೆ ತುತ್ತಾಗಿ ಸಂಕಷ್ಟ ಪಡುವ ಬದಲು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು~ ಎಂದು ನಗರಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ ಸಲಹೆ ನೀಡಿದರು.ಯುವ ಕಾಂಗ್ರೆಸ್ ವತಿಯಿಂದ ಕೆಂಗುಂಟೆ ರಾಜರಾಜೇಶ್ವರಿನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಕ್ತದಾನ, ನೇತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಜಿ. ಮೋಹನಕುಮಾರ್, ಮುಖಂಡರಾದ ಹನುಮೇಗೌಡ, ಕೃಷ್ಣ, ಅಮರನಾಥ್ ಉಪಸ್ಥಿತರಿದ್ದರು. ಪೌರಕಾರ್ಮಿಕರಿಗೆ ಚಿಕಿತ್ಸೆ: ರಾಜರಾಜೇಶ್ವರಿನಗರ ಪಾಲಿಕೆ ವಲಯ ವ್ಯಾಪ್ತಿಯ ಪೌರಕಾರ್ಮಿಕರಿಗೆ, ಸಿಬ್ಬಂದಿಗೆ ವಾಸನ್ ಐ ಕೇರ್ ಆಸ್ಪತ್ರೆ ವತಿಯಿಂದ ಈಚೆಗೆ ಉಚಿತ ನೇತ್ರ ತಪಾಸಣೆ ನಡೆಸಲಾಯಿತು. ಪಾಲಿಕೆಯ ಉಪ ಆರೋಗ್ಯಾಧಿಕಾರಿ ಡಾ.ಮನೋರಂಜನ್ ಹೆಗಡೆ, ಡಾ. ಲೋಕೇಶ್ ತುಳಸಿರಾಮ್, ಗಂಗಾಧರ್, ವಿಜಯಕುಮಾರ್ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry