ನಿಯಮ ಉಲ್ಲಂಘನೆ: ವಿಶೇಷ ಅಭಿಯಾನ

ಶನಿವಾರ, ಜೂಲೈ 20, 2019
24 °C

ನಿಯಮ ಉಲ್ಲಂಘನೆ: ವಿಶೇಷ ಅಭಿಯಾನ

Published:
Updated:

ಬೆಂಗಳೂರು: ರಹದಾರಿ ನಿಯಮ- ಷರತ್ತು ಉಲ್ಲಂಘಿಸಿ ಪ್ರಯಾಣಿಕರನ್ನು ಕರೆದೊಯ್ಯವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲು ಕೋರಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ಟಿ.ಹಾಲಸ್ವಾಮಿ ಅವರ ನೇತೃತ್ವದ ತಂಡ ಬುಧವಾರ ವಿಶೇಷ ಅಭಿಯಾನ ನಡೆಸಿತು.ನಗರದ ಸಿಲ್ಕ್‌ಬೋರ್ಡ್ ಜಂಕ್ಷನ್, ಬನಶಂಕರಿ ಬಸ್ ನಿಲ್ದಾಣ, ಅಗರ ಕೆರೆ ಸಮೀಪ ತಂಡವು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿ ವಾಹನ ಚಾಲಕರ ದಾಖಲೆಗಳ ತಪಾಸಣೆ ನಡೆಸಿತು. ನಿಯಮ ಉಲ್ಲಂಘಿಸಿದ 16 ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು.`ಖಾಸಗಿ ಕಂಪೆನಿ, ಕಾಲ್‌ಸೆಂಟರ್ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಬಿಎಂಟಿಸಿ ಬಸ್ ಪ್ರಯಾಣ ದರಕ್ಕಿಂತ ಕಡಿಮೆ ದರ ಪಡೆದು ಅವರು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾರೆ ಎಂಬ ಮಾಹಿತಿಯೂ ಇದ್ದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು~ ಎಂದು ಹಾಲಸ್ವಾಮಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.`ರಹದಾರಿ ನಿಯಮ ಮತ್ತು ಷರತ್ತನ್ನು ಯಾರೂ ಉಲ್ಲಂಘಿಸಬಾರದು. ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾರ್ಯಾಚರಣೆಯನ್ನು ಮುಂದುವರೆಸಲಾಗುತ್ತದೆ~ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry