ನಿಯಮ ಉಲ್ಲಂಘಿಸಿದ ಸಕ್ಕರೆ ಕಾರ್ಖಾನೆ ಮುಟ್ಟುಗೋಲಿಗೆ ಆಗ್ರಹ

ಶನಿವಾರ, ಜೂಲೈ 20, 2019
22 °C

ನಿಯಮ ಉಲ್ಲಂಘಿಸಿದ ಸಕ್ಕರೆ ಕಾರ್ಖಾನೆ ಮುಟ್ಟುಗೋಲಿಗೆ ಆಗ್ರಹ

Published:
Updated:

ಗುಲ್ಬರ್ಗ: ಅಫಜಲಪುರ ತಾಲ್ಲೂಕು ಹಾವಳಗಾದಲ್ಲಿನ ರೇಣುಕಾ ಶುಗರ್ಸ್ ಸಕ್ಕರೆ ಕಾರ್ಖಾನೆಯು ಸರ್ಕಾರದಿಂದ ಅನುಮೋದನೆ ಪಡೆದಿಲ್ಲ ಎಂದು ಆರೋಪಿಸಿರುವ ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರುಣಕುಮಾರ ಪಾಟೀಲ, ಕಾರ್ಖಾನೆಯು ಸರ್ಕಾರದ ಕಾಯ್ದೆ-ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಆಪಾದಿಸಿದ್ದಾರೆ.ಆದೇಶ ಪಾಲಿಸದ ಕಾರ್ಖಾನೆಯನ್ನು ಸರ್ಕಾರಿ ಮುಟ್ಟುಗೋಲು ಹಾಕಿಕೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ಹವಳಗಾ ಗ್ರಾಮದ 69 ಎಕರೆ, 25 ಗುಂಟೆ ಭೂಮಿಯಲ್ಲಿ ಸ್ಥಾಪನೆಗೊಂಡ ಕಾರ್ಖಾನೆಯು ಕರ್ನಾಟಕ ಭೂಸುಧಾರಣಾ ಕಾಯ್ದೆ (1961ರ ಕಲಂ 109) ಅಡಿ ಸರ್ಕಾರದಿಂದ ಅನುಮೋದನೆ ಪಡೆಯಬೇಕಿತ್ತು. ಆದರೆ ಈ ವಿಷಯದಲ್ಲಿ ನಿಯಮ ಗಾಳಿಗೆ ತೂರಿದ ಕಾರ್ಖಾನೆಯು, ಜಮೀನನ್ನು ತನ್ನ ಹೆಸರಿಗೆ ಹಕ್ಕು ಬದಲಾವಣೆಯನ್ನು ಅನಧಿಕೃತವಾಗಿ ಮಾಡಿಕೊಂಡಿದೆ ಎಂದು ಆಪಾದಿಸಿದರು.ಸುಮಾರು 500 ಕೋಟಿ ರೂಪಾಯಿ ಖರ್ಚುಮಾಡಿ ಆರಂಭವಾದ ಕಾರ್ಖಾನೆಯು ಐದು ವರ್ಷ ಕಳೆದರೂ ತಹಸೀಲ್ದಾರ ಅಥವಾ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ. ಎಲ್ಲ ಅಧಿಕಾರಿಗಳೂ ಕಬ್ಬು ಬೆಳೆಗಾರರಿಗೆ ಸಹಕಾರ ಮಾಡದೇ, ಕಾರ್ಖಾನೆಯ ಮುಂದೆ ಶರಣಾಗಿರುವುದು ದುರಂತ. ಇದು ಬಡ ರೈತರಿಗೆ ಎಸಗಿದ ದ್ರೋಹ” ಎಂದು ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.ಕಾರ್ಖಾನೆ ಎಸಗಿದ ತಪ್ಪು ಹಾಗೂ ಅಧಿಕಾರಿಗಳು ತೋರಿದ ನಿರ್ಲಕ್ಷ್ಯ ಕುರಿತ ಸಂಪೂರ್ಣ ವಿವರಗಳನ್ನು ಪತ್ರದಲ್ಲಿ ಬರೆದು ರಾಜ್ಯಪಾಲರಿಗೆ ಕಳಿಸಲಾಗಿದೆ. ಸರ್ಕಾರ ತಕ್ಷಣ ಕಾರ್ಖಾನೆಯನ್ನು ಮುಟ್ಟುಗೋಲು ಹಾಕಿಕೊಂಡು, ತನ್ನ ವಶಕ್ಕೆ ಪಡೆಯಬೇಕು. ಇದರ ಜತೆಗೆ ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅರುಣಕುಮಾರ ಪಾಟೀಲ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry