ಸೋಮವಾರ, ಜನವರಿ 20, 2020
18 °C

ನಿಯಮ ಬಾಹಿರ ಬೌಲಿಂಗ್: ಶಿಲ್ಲಿಂಗ್‌ಫೋರ್ಡ್‌ಗೆ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಪಿಟಿಐ): ವೆಸ್ಟ್ ಇಂಡೀಸ್ ತಂಡದ ಪ್ರಮುಖ ಸ್ಪಿನ್ನರ್ ಶೇನ್ ಶಿಲ್ಲಿಂಗ್‌ಫೋರ್ಡ್‌ ಅವರು ನಿಯಮ ಬಾಹಿರ ಬೌಲಿಂಗ್ ಶೈಲಿಯ ಕಾರಣಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟಿನಲ್ಲಿ ಬೌಲಿಂಗ್ ಮಾಡದಂತೆ ಐಸಿಸಿ ಸೋಮವಾರ ನಿರ್ಬಂಧ ವಿಧಿಸಿದೆ. ಇದೇ ವೇಳೆ ಆಲ್‌ರೌಂಡರ್ ಮಾರ್ಲನ್ ಸ್ಯಾಮುಯೆಲ್ಸ್ ಅವರಿಗೆ  ಅಂತರರಾಷ್ಟ್ರೀಯ ಕ್ರಿಕೆಟಿನಲ್ಲಿ ಕ್ಷಿಪ್ರ ಎಸೆತಗಳಿಗೆ ಮಾತ್ರ ನಿರ್ಬಂಧಿಸಿದೆ.

ಶಿಲ್ಲಿಂಗ್ ಫೋರ್ಡ್ ಅವರು ನಿಯಮ ಬಾಹಿರ ಬೌಲಿಂಗ್ ಶೈಲಿ ಹೊಂದಿದ್ದಾರೆ ಎಂಬುದನ್ನು ಸ್ವತಂತ್ರ ಜೈವಿಕ–ಯಾಂತ್ರಿಕ ವಿಶ್ಲೇಷಕದಿಂದ ತಿಳಿದುಬಂದಿದೆ. ಹೀಗಾಗಿ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟಿನಲ್ಲಿ ಬೌಲಿಂಗ್ ಮಾಡದಂತೆ ಅಮಾನತು ಮಾಡಲಾಗಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಶಿಲ್ಲಿಂಗ್‌ಫೋರ್ಡ್‌ ಅವರ ಆಫ್ ಬ್ರೆಕ್ ಮತ್ತು ದೂಸ್ರಾ ಎಸೆತಗಳನ್ನು ಪರೀಕ್ಷಿಸಲಾಗಿದೆ. ಈ ಎಸೆತಗಳನ್ನು ಹಾಕುವಾಗ ಐಸಿಸಿ ವಿಧಿಸಿರುವ ಮೊಣಕೈ ವಿಸ್ತರಣೆಯ ಮಿತಿ 15 ಡಿಗ್ರಿಯನ್ನು ಮೀರುತ್ತಿದೆ ಎಂದು ವಿಶ್ಲೇಷಣೆಯಿಂದ ಬಹಿರಂಗಗೊಂಡಿದೆ.

ಇನ್ನೊಂದೆಡೆ ಸ್ಯಾಮುಯೆಲ್ಸ್ ಅವರ ಕ್ಷಿಪ್ರ ಎಸೆತಗಳು (quicker deliveries) ನಿಯಮ ಬಾಹಿರವಾಗಿವೆ. ಹೀಗಾಗಿ ಅಂತರರಾಷ್ಟ್ರೀಯ ಕ್ರಿಕೆಟಿನಲ್ಲಿ ಅವರ ಕ್ಷಿಪ್ರ ಎಸೆತಗಳಿಗೆ ಮಾತ್ರ ನಿರ್ಬಂಧಿಸಿದೆ.  

 

ಪ್ರತಿಕ್ರಿಯಿಸಿ (+)