ಗುರುವಾರ , ಮೇ 13, 2021
18 °C

ನಿಯಮ ಸಡಿಲಿಸಲು ಒಬಾಮ ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಉಪಗ್ರಹಕ್ಕೆ ಸಂಬಂಧಿಸಿದ ತಂತ್ರಜ್ಞಾನ ಮತ್ತು ಇತರ ಸಲಕರಣೆಗಳ ಮೇಲೆ ಇರುವ ರಫ್ತು ನಿಯಂತ್ರಣವನ್ನು ಸಡಿಲಗೊಳಿಸುವಂತೆ ಒಬಾಮ ಆಡಳಿತವು ಅಮೆರಿಕ ಕಾಂಗ್ರೆಸ್‌ನ್ನು ಕೋರಿದೆ.

21ನೇ ಶತಮಾನದ ಸವಾಲುಗಳನ್ನು ಎದುರಿಸಲು ಉಪಗ್ರಹ ಸಂಬಂಧಿ ರಫ್ತು ನಿಯಮಾವಳಿಗಳನ್ನು ಸಡಿಲಗೊಳಿಸುವುದು ಅನಿವಾರ್ಯ ಎಂದು ಶ್ವೇತಭವನ ಅಭಿಪ್ರಾಯಪಟ್ಟಿದೆ.ಉಪಗ್ರಹ ಸಂಬಂಧಿ ರಫ್ತು ನಿಯಂತ್ರಣವನ್ನು ಪರಾಮರ್ಶಿಸುವುದು ಅಗತ್ಯ ಎಂದು ರಕ್ಷಣೆ ಮತ್ತು ವಿದೇಶಾಂಗ ಇಲಾಖೆಗಳು ಜಂಟಿಯಾಗಿ ಸಿದ್ಧಪಡಿಸಿರುವ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವರದಿಯಲ್ಲಿ ತಿಳಿಸಿರುವುದರಿಂದ ಒಬಾಮ ಆಡಳಿತವು ಕಾಂಗ್ರೆಸ್‌ಗೆ ನಿಯಮ ಸಡಿಲ ಮಾಡುವ ಕುರಿತು ಮನವಿ ಮಾಡಿದೆ.ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿ ಇರುವ ಇತರ ರಾಷ್ಟ್ರಗಳಲ್ಲಿ ಉಪಗ್ರಹ ಸಂಬಂಧಿ ತಂತ್ರಜ್ಞಾನ ಮತ್ತು ಸಲಕರಣೆಗಳ ರಫ್ತಿನ ಮೇಲೆ ಹೆಚ್ಚಿನ ನಿರ್ಬಂಧಗಳಿಲ್ಲ. ಕಳೆದ 15 ವರ್ಷಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳು ಆಗಿರುವುದರಿಂದ ನೇರ ಟಿವಿ ಪ್ರಸಾರ, ಉಪಗ್ರಹ ಸಂಪರ್ಕ, ಭೂಮಿಯ ನಕ್ಷೆ ಸಿದ್ಧಪಡಿಸುವಂತಹ ಕಾರ್ಯಗಳು ಈಗ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಸೂಕ್ಷ್ಮ ವಿಷಯಗಳಾಗಿ ಉಳಿದಿಲ್ಲ.ಆದ್ದರಿಂದ  ಉಪಗ್ರಹ ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು `ರಹಸ್ಯ~ ಎಂಬ ಕಾರಣ ನೀಡಿ ಬಿಗಿ ರಫ್ತು ನಿಯಮ ಅನುಸರಿಸುವುದು ಸಮಂಜಸವಲ್ಲ ಎಂದು ಒಬಾಮ ಆಡಳಿತ ಅಭಿಪ್ರಾಯಪಟ್ಟಿದೆ.ಉಪಗ್ರಹ ಉಡಾವಣೆ, ನಿಯಂತ್ರಣ, ಉಡಾವಣಾ ವಾಹಕ ಇವೇ ಮೊದಲಾದ ತಂತ್ರಜ್ಞಾನಗಳ ರಫ್ತಿಗೆ ಮಾತ್ರ ಬಿಗಿ ನಿಯಮ ಅನುಸರಿಸಬಹುದು.ವಾಣಿಜ್ಯ ಬಳಕೆಯ ತಂತ್ರಜ್ಞಾನ ಮತ್ತು ಸಲಕರಣೆಗಳನ್ನು ಈ ಬಿಗಿ ನಿಯಮದಿಂದ ಹೊರತುಪಡಿಸಲು ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗಿದೆ ಎಂದು ಶ್ವೇತಭವನವು ಕಾಂಗ್ರೆಸ್‌ಗೆ ಕೋರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.