ಮಂಗಳವಾರ, ನವೆಂಬರ್ 12, 2019
28 °C

ನಿರಂಕುಶ ಧೋರಣೆಗೆ ಬೇಸರ: ಟೀಕೆ

Published:
Updated:

ಗೌರಿಬಿದನೂರು: ತಾಲ್ಲೂಕಿನಲ್ಲಿ ಕುಟುಂಬ ರಾಜಕಾರಣ ಕೊನೆಗೊಳೆಸಲು ಪಕ್ಷೇತರ ಅಭ್ಯರ್ಥಿ ಕೆ.ಜೈಪಾಲ್‌ರೆಡ್ಡಿ ಅವರನ್ನು ಬೆಂಬಲಿಸುತ್ತಿರುವುದಾಗಿ ಮುಖಂಡ ಆರ್.ಅಶೋಕ್‌ಕುಮಾರ್ ತಿಳಿಸಿದರು.ಯಾವುದೇ ಆಸೆಗೆ ಬಲಿಯಾಗದೆ ತಾಲ್ಲೂಕಿನ ಅಭಿವೃದ್ಧಿ ಗಮನದಲ್ಲಿಟ್ಟುಕೊಂಟು ಕೆ.ಜೈಪಾಲ್‌ರೆಡ್ಡಿಗೆ ಬೆಂಬಲ ನೀಡಲಾಗುತ್ತಿದೆ.  ಬಿಜೆಪಿ ಪಕ್ಷದಲ್ಲಿ ಆಂತರಿಕ ಕಲಹಗಳಿಂದ ಬೇಸತ್ತು ಹೊರಬರಲಾಗಿದೆ. ಯುವಕರಾದ ಜೈಪಾಲ್‌ರೆಡ್ಡಿ ತಾಲ್ಲೂಕಿನಲ್ಲಿ ಎರಡು ವರ್ಷಗಳಿಂದ ಅನೇಕ ಸಾಮಾಜಿಕ ಸೇವೆಗಳನ್ನು ಸಲ್ಲಿಸುತ್ತಿರುವುದರಿಂದ ನಮಗೆ ಪೂರಕ ವಾತಾವರಣವಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ವೇಣುಗೋಪಾಲ್‌ರೆಡ್ಡಿ ಮಾತನಾಡಿ ಕಾಂಗ್ರೆಸ್ ಪಕ್ಷದದಲ್ಲಿ  ಹಲವು ವರ್ಷಗಳಿಂದ ದುಡಿದು ಪಕ್ಷವನ್ನು ಸಂಘಟಿಸಿದ್ದೇನೆ. ಆದರೆ ಶಾಸಕ ಶಿವಶಂಕರರೆಡ್ಡಿ ನಿರಕುಂಶ ಧೋರಣೆಯಿಂದ ನನ್ನನ್ನು ರಾಜಕೀಯವಾಗಿ ಮೇಲೆ ಬರಲು ಬಿಡದೆ ರಾಜಕೀಯವಾಗಿ ಮುಗಿಸಲು ಹೊರಟ್ಟಿದ್ದರಿಂದ ಬೇಸತ್ತು ಪಕ್ಷ ತೊರೆದೆ ಎಂದರು.ತಾ.ಪಂ. ಮಾಜಿ ಅಧ್ಯಕ್ಷ ಗಂಗಾಧರಪ್ಪ, ಅಲಕಾಪುರ ಗ್ರಾ.ಪಂ.ಸದಸ್ಯ ರಾಮಕೃಷ್ಣ, ತರಿದಾಳು ಆನಂದ್, ವಿವೇಕಾನಂದರೆಡ್ಡಿ, ಬಾಬುರೆಡ್ಡಿ, ರಾಮು, ನಾರಾಯಣಪ್ಪ, ಮಹದೇವ ಪಕ್ಷೇತರ ಅಭ್ಯರ್ಥಿ ಕೆ.ಜೈಪಾಲ್‌ರೆಡ್ಡಿ ಬಣಕ್ಕೆ ಸೇರ್ಪಡೆಗೊಂಡರು.

ಪ್ರತಿಕ್ರಿಯಿಸಿ (+)