`ನಿರಂತರಂ' ನೃತ್ಯೋತ್ಸವ

7

`ನಿರಂತರಂ' ನೃತ್ಯೋತ್ಸವ

Published:
Updated:
`ನಿರಂತರಂ' ನೃತ್ಯೋತ್ಸವ

ಸಂಗೀತದ ಕುಟುಂಬ. ಅಪ್ಪ, ಅಮ್ಮ ಸಂಗೀತದಲ್ಲಿ ವಿದ್ವತ್ತು ಸಂಪಾದಿಸಿದವರು. ಮಗಳಿಗೂ ಸಂಗೀತದಲ್ಲಿ ಆಸಕ್ತಿ ಬೆಳೆಯಿತು. ತಾನು ಸಂಗೀತದಲ್ಲಿ ವಿದ್ವತ್ತು ಸಂಪಾದಿಸಬೇಕೆಂಬ ಹಠ ಬೆಳೆಯಿತು. ಅಂದಿನಿಂದಲೇ ಸಂಗೀತದ ಆರಾಧಕರಾದರು.

ಹೀಗೆ ತಮ್ಮ ಕುಟುಂಬದ ಸಂಗೀತವನ್ನು ಮೈಗೂಡಿಸಿಕೊಂಡ ಪಿ.ರಮಾ ಎಂಟನೇ ವಯಸ್ಸಿನಲ್ಲಿಯೇ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸವನ್ನು ಆರಂಭಿಸಿದರು.ಸಂಗೀತ ವಿದುಷಿ ನಾಗಮಣಿ ಶ್ರೀನಾಥ್ ಮತ್ತು ವಿದ್ವಾನ್ ಆರ್.ಕೆ.ಶ್ರೀಕಂಠ ಅವರಲ್ಲಿ ಸಂಗೀತಾಭ್ಯಾಸ ಮಾಡಿದ ಅವರು ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸಿದರು. ನಂತರ ವಿದೇಶಗಳಲ್ಲಿಯೂ ಸಂಗೀತ ಕಛೇರಿಗಳನ್ನು ನಡೆಸಿದ್ದಾರೆ. ಅಮೆರಿಕ, ಯೂರೋಪ್ ದೇಶಗಳಲ್ಲಿ ಕೂಡ ಸಂಗೀತ ಕಛೇರಿಗಳನ್ನು ನಡೆಸಿ ಅಲ್ಲಿ ಅನೇಕ ಅಭಿಮಾನಗಳನ್ನು ಪಡೆದಿದ್ದಾರೆ.`ಸಂಗೀತಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕು ಎಂಬ ಹಂಬಲದಿಂದ `ಸಂಗೀತ ಸಂಭ್ರಮ' ಸಂಗೀತ ಸಂಸ್ಥೆಯನ್ನು ಸ್ಥಾಪಿಸಿದೆ. ಅದರಲ್ಲೂ ಅಂಗವಿಕಲ ಮಕ್ಕಳಿಗೆ ಸಂಗೀತವನ್ನು ಕಲಿಸಬೇಕೆಂಬ ಆಶಯ ನನ್ನದು. ಒಂಬತ್ತು ವರ್ಷದ ನನ್ನ ಮೊಮ್ಮಗಳೇ ಅಂಗವಿಕಲೆ. ಹಾಸಿಗೆಯಲ್ಲಿ ಮಲಗಿಯೇ ಅವಳ ಜೀವನ ನಡೆದಿದೆ. ಇದರಿಂದ ಮನಸ್ಸು ನೊಂದಿತು. ಅದಕ್ಕಾಗಿ ಅಂಗವಿಕಲ ಮಕ್ಕಳು ಮತ್ತು ಸಂಗೀತಕ್ಕೆ ನನ್ನ ಕೈಯಿಂದಾದ ಸೇವೆ ಮಾಡಬೇಕೆಂಬ ಮಹದಾಸೆಗೆ ಇದೇ ಸ್ಫೂರ್ತಿಯಾಯಿತು.ಸಂಗೀತ ಸಂಭ್ರಮ ಸಂಸ್ಥೆಯನ್ನು ಸ್ಥಾಪಿಸಿ ನಾಲ್ಕು ವರ್ಷವಾಯಿತು. ಅಂದಿನಿಂದ ಮಕ್ಕಳಿಗೆ ಸಂಗೀತ ಪಾಠವನ್ನು ಮಾಡುತ್ತ ಬಂದಿದ್ದೇನೆ. ಅಂಗವಿಕಲ ಮಕ್ಕಳಿಗೆ ಕಲಿಸುವುದು ಕಷ್ಟ. ತುಂಬಾ ಸಹನೆ ಬೇಕು. ಆದರೂ, ಪ್ರಯತ್ನ ಪಟ್ಟು ಅವರಿಗೆ ಇರುವ ಆಸಕ್ತಿಯನ್ನು ಗಮನಿಸಿ ಅವರಿಗೆ ಸಂಗೀತವನ್ನು ಕಲಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ' ಎನ್ನುವ ರಮಾ ಅವರಿಗೆ ಕೂಚುಪುಡಿ, ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಲಘು ಸಂಗೀತ ಎಲ್ಲವನ್ನೂ ಒಂದೇ ಸೂರಿನಡಿ ಕಲಿಸಬೇಕೆನ್ನುವ ಮಹದಾಸೆ.ಈಗ ಅವರಲ್ಲಿ ನಲವತ್ತು ಮಕ್ಕಳು ಸಂಗೀತ ಕಲಿಯುತ್ತಿದ್ದಾರೆ. ಇಪ್ಪತ್ತು ಮಕ್ಕಳು ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಬಡ ಮಕ್ಕಳಿಗೆ ಅವರು ಉಚಿತವಾಗಿ ಸಂಗೀತವನ್ನು ಹೇಳಿಕೊಡುತ್ತಾರೆಂಬುದು ವಿಶೇಷ.ಸಂಗೀತ ಸಂಭ್ರಮ ಸಂಸ್ಥೆಯು ಜನವರಿ 6ರಿಂದ 13ರವರೆಗೆ ಮಲ್ಲೇಶ್ವರದ ಸೇವಾ ಸದನ ಮತ್ತು ಗಾಯನ ಸಮಾಜದಲ್ಲಿ `ನಿರಂತರಂ' ಸಂಗೀತ ಮತ್ತು ನೃತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಸುಮಾರು 50 ಮಕ್ಕಳು ನೃತ್ಯ ಪ್ರದರ್ಶಿಸಲಿದ್ದಾರೆ. ಅದರಲ್ಲಿ ನಾಲ್ಕು ಶಾಲೆಯ ಮಕ್ಕಳು ಪ್ರದರ್ಶಿಸಲಿರುವ ನೃತ್ಯ ವಿಶೇಷವಾದದ್ದು.ವಿವರಗಳಿಗೆ ಸಂಪರ್ಕಿಸಿ: ಎ. 208, ಕಸ್ತೂರಿಧಾಮ ಅಪಾರ್ಟ್‌ಮೆಂಟ್, 8 ನೇ ಮುಖ್ಯರಸ್ತೆ, ಮಲ್ಲೇಶ್ವರ. ದೂರವಾಣಿ ಸಂಖ್ಯೆ- 2336 2525 ಮೊಬೈಲ್- 98452 56988.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry