ನಿರಂತರ ಅಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಸಲಹೆ

7

ನಿರಂತರ ಅಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಸಲಹೆ

Published:
Updated:
ನಿರಂತರ ಅಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಸಲಹೆ

 


ಬೆಂಗಳೂರು: `ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲೇ ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು' ಎಂದು ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಎನ್.ರಂಗಸ್ವಾಮಿ ಕರೆ ನೀಡಿದರು.

ವಿ.ವಿ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ವತಿಯಿಂದ ಪ್ರಾರಂಭಿಸಿರುವ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

 

`ಪರೀಕ್ಷಾ ಸಿದ್ಧತೆಯನ್ನು ಸಾಕಷ್ಟು ಮುಂಚಿತವಾಗಿಯೇ ಪ್ರಾರಂಭಿಸಬೇಕು. ಆಗ ಭವಿಷ್ಯದಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಬಹುದು' ಎಂದು ಅವರು ಅಭಿಪ್ರಾಯಪಟ್ಟರು.

 

ಕಾರ್ಯಕ್ರಮ ಉದ್ಘಾಟಿಸಿದ ಕುಲ ಸಚಿವ ಡಾ.ಟಿ.ಡಿ.ಕೆಂಪುರಾಜು, `ಗೆಲುವು ಶಾಶ್ವತ ಅಲ್ಲ, ಸೋಲು ಕೊನೆಯಲ್ಲ; ಸಾಧನೆಯ ದಿನಗಳ ಪರಿಶ್ರಮ, ನೋವು ಮುಂದಿನ ಜೀವನದ ಭವಿಷ್ಯ ರೂಪಿಸಿಕೂಳ್ಳಲು ಸಹಕಾರಿಯಾಗಲಿದೆ' ಎಂದರು.

 

ಪ.ಜಾ ಮತ್ತು ಪಂ. ಘಟಕದ ವಿಶೇಷಾಧಿಕಾರಿ ಡಾ.ಸಿ.ಶಿವರಾಜು, ಸಿಂಡಿಕೇಟ್ ಸದಸ್ಯ ಡಿ.ಎಸ್. ಕೃಷ್ಣ, ವಿ.ವಿ. ವಿತ್ತಾಧಿಕಾರಿ ಕೆ.ಎನ್.ಫಣಿಶಾಯಿ, ಶಿಕ್ಷಕೇತರ ಸಂಘದ ಅಧ್ಯಕ್ಷ ವೆಂಕಟಯ್ಯ ಮೊದಲಾದವರು ಉಪಸ್ಥಿತರಿದ್ದರು. ಮಾಹಿತಿ ಮತ್ತು ಗ್ರಂಥಾಲಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಟಿ.ಎನ್.ಜಯರಾಮರೆಡ್ಡಿ ನಿರೂಪಿಸಿದರು. ಎಂ.ಪದ್ಮನಾಭ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry