`ನಿರಂತರ ಅಭ್ಯಾಸದಿಂದಫಲಿತಾಂಶ ಹೆಚ್ಚಳ'

ಶುಕ್ರವಾರ, ಜೂಲೈ 19, 2019
28 °C

`ನಿರಂತರ ಅಭ್ಯಾಸದಿಂದಫಲಿತಾಂಶ ಹೆಚ್ಚಳ'

Published:
Updated:

ಗುಲ್ಬರ್ಗ: ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸದಾ ಕಾರ್ಯ ಪ್ರವೃತ್ತರಾಗಬೇಕು ಎಂದು ಡಾ. ಎಂ. ಆರ್. ಹುಗ್ಗಿ ನುಡಿದರು.ನಗರದ ಮಾತೋಶ್ರಿ ಗೋದುತಾಯಿ ದೊಡ್ಡಪ್ಪ ಅಪ್ಪಾ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ನ್ಯಾಕ್-ಟಿಕ್ಯುಎಂ (ಸಮಗ್ರ ಶೈಕ್ಷಣಿಕ ಗುಣಮಟ್ಟ ನಿರ್ವಹಣೆ) ಕಾರ್ಯಕ್ರಮದಲ್ಲಿ ಅವರು ಮಾತ  ನಾಡಿದರು.ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲ ಡಾ. ಎಸ್.ಜಿ. ಡೊಳ್ಳೇಗೌಡ್ರ ಮಾತ ನಾಡಿದರು. ಪ್ರೊ.ಶಾಂತಲಾ ಅಪ್ಪಾ, ಪ್ರೊ. ಕ್ಷೇಮಲಿಂಗ ಬಿರಾದಾರ, ಪ್ರೊ. ಶ್ರಿದೇವಿ ಹರವಾಳ, ಪ್ರೊ. ರೇಣುಕಾ ಕನಕೇರಿ, ಡಾ. ಸೀಮಾ ಪಾಟೀಲ, ಪ್ರೊ. ಆಶಾ ಚವ್ಹಾಣ, ಪ್ರೊ. ಎನ್.ಎಸ್. ಹೂಗಾರ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಹಾಜರಿದ್ದರು. ಡಾ. ಸಿದ್ದಮ್ಮ ಗುಡೇದ ನಿರೂಪಿಸಿದರು. ಡಾ. ನೀಲಾಂಬಿಕಾ ಪೋಲಿಸ ಪಾಟೀಲ ಸ್ವಾಗತಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry