ನಿರಂತರ ಅಭ್ಯಾಸ ಮಕ್ಕಳಿಗೆ ಸೂಕ್ತ

7

ನಿರಂತರ ಅಭ್ಯಾಸ ಮಕ್ಕಳಿಗೆ ಸೂಕ್ತ

Published:
Updated:

ದೇವನಹಳ್ಳಿ: `ಜೀವನದ ಪ್ರತಿಯೊಂದ ಕಾಲಘಟ್ಟದಲ್ಲಿ ಬದಲಾವಣೆ ಅಗತ್ಯ. ಗುಣಮಟ್ಟದ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಬೇಕು~ ಎಂದು ಹೆಣ್ಣು ಮಕ್ಕಳ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಧಾತಾಯಿ ತಿಳಿಸಿದರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಕೊಠಡಿ ಆವರಣದಲ್ಲಿ ಕಿಸಾನ್ ಸಭಾ ಟ್ರಸ್ಟ್‌ವತಿಯಿಂದ ನಡೆಸಲಾಗುತ್ತಿರುವ 10ನೇ ತರಗತಿ ಮಕ್ಕಳಿಗೆ ದಸರಾ ರಜೆಯ ವಿಶೇಷ ಭೋದನಾ ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ಮತ್ತು ಮಾದರಿ ಪ್ರಶ್ನಾವಳಿಗಳನ್ನು ವಿತರಿಸಿ ಅವರು ಮಾತನಾಡಿದರು.ವಿಜ್ಞಾನ ಶಿಕ್ಷಕ ನಾರಾಯಣ ಮಾತನಾಡಿ `ಕಳೆದ ಹತ್ತು ಮಕ್ಕಳಿಗೆ ಸುಲಭ ವಿಧಾನದ ಮೂಲಕ ಮಕ್ಕಳಿಗೆ ಪಠ್ಯ ವಿಷಯಗಳನ್ನು ಕಲಿಸಲಾಗಿದೆ. ಜ್ಞಾಪಕ ಇಟ್ಟುಕೊಳ್ಳಲು ತರಬೇತಿ ಸಮಯದಲ್ಲಿ ಹೇಳಿಕೊಟ್ಟ ಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು~ ಎಂದರು.ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಂಡ ವಿದ್ಯಾರ್ಥಿನಿಯರಾದ ಹೇಮಾವತಿ ಹಾಗೂ ಶಿಲ್ಪ, `ಶಿಬಿರದಿಂದ ಉತ್ತಮ ಆತ್ಮಸ್ಥೈರ್ಯ ಮೂಡಿದೆ. ಪಠ್ಯವಾರು ವಿಷಯಗಳ ಬಗ್ಗೆ ವಿಡಿಯೋ ಹಾಗೂ ಪ್ರಾಯೋಗಿಕವಾಗಿ ತಿಳಿಸಿದ್ದು, ಹೆಚ್ಚಿನ ವಿಷಯಗಳ ಬಗ್ಗೆ ಅರಿವಾಗಿದೆ. ಆಂಗ್ಲ ಮತ್ತು ಕನ್ನಡ ಭಾಷೆಯ ವಿಷಯದಲ್ಲಿ ವ್ಯಾಕರಣದ ಬಗ್ಗೆ ಹೆಚ್ಚು ಅಂಕ ಪಡೆಯಲು ಉತ್ತಮ ಸಲಹೆ ದೊರಕಿದೆ. ಇದೇ ರೀತಿ ಶಿಬಿರಗಳು ಮುಂಬರುವ ವಿದ್ಯಾರ್ಥಿಗಳಿಗೂ ಆಯೋಜಿಸಿದ್ದಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದರು.ಉಪ ಪ್ರಾಂಶುಪಾಲ ನಾಗರತ್ನ ಬಡಿಗೆರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಅಶ್ವಥರಾವ್ ಗುರುರಾಜ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry