ನಿರಂತರ ಜ್ಯೋತಿ ಯೋಜನೆಗೆ ಚಾಲನೆ

7

ನಿರಂತರ ಜ್ಯೋತಿ ಯೋಜನೆಗೆ ಚಾಲನೆ

Published:
Updated:

ಚಿಕ್ಕೋಡಿ: ತಾಲ್ಲೂಕಿನ ಬೇಡಕಿಹಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯತಿ ಕಟ್ಟಡದ ಉದ್ಘಾಟನೆ ಮತ್ತು ಗ್ರಾಮದಲ್ಲಿ 24 ಗಂಟೆ ವಿದ್ಯುತ್ ಸರಬರಾಜು ಕಲ್ಪಿಸುವ ನಿರಂತರ ಜ್ಯೋತಿ ಯೋಜನೆಗೆ ಚಾಲನಾ ಸಮಾರಂಭ ಮಂಗಳವಾರ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಗ್ರಾ.ಪಂ.ನ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿದರೆ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಲಿದೆ ಎಂದು ಹೇಳಿದರು.ಶಾಸಕ ಪ್ರಕಾಶ ಹುಕ್ಕೇರಿ , ನಿರಂತರ ಜ್ಯೋತಿ ವಿದ್ಯುತ್ ಸರಬರಾಜು ಅನುಷ್ಠಾನ ಕಾಮಗಾರಿಯ ಗುತ್ತಿಗೆಯನ್ನು ಹೈದ್ರಾಬಾದ್ ಮೂಲಕ ಕಂಪೆನಿಯೊಂದಕ್ಕೆ ವಹಿಸಲಾಗಿದೆ. ಹೆಸ್ಕಾಂ ಈ ಗುತ್ತಿಗೆಯನ್ನು ಬದಲಿಸಿ, ಸ್ಥಳೀಯ ಕಂಪೆನಿಗಳಿಗೆ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.ವಿಧಾನ ಪರಿಷತ್ ಸದಸ್ಯ ವೀರಕುಮಾರ ಪಾಟೀಲ ಮಾತನಾಡಿದರು. ಶಾಸಕ ಕಾಕಾಸಾಹೇಬ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಜಿ.ಪಂ.ಪ್ರಭಾರ ಅಧ್ಯಕ್ಷ ರಾವಸಾಹೇಬ ಝಿಪರೆ, ಸದಸ್ಯೆ ಸುಜಾತಾ ಖೋತ, ಅಶೋಕ ಅರಗೆ, ಬೇಡಕಿಹಾಳ ಅರ್ಬನ್ ಬ್ಯಾಂಕ್ ಅಧ್ಯಕ್ಷ ಗೋಪಾಳದಾದಾ ಪಾಟೀಲ, ತಾಜುದ್ದೀನ್ ಮುಲ್ಲಾ, ಗ್ರಾ.ಪಂ.ಉಪಾಧ್ಯಕ್ಷೆ ವೈಶಾಲಿ ಚೌಗುಲೆ ಲಕ್ಷ್ಮಣರಾವ ಚಿಂಗಳೆ, ಅಶೋಕಕುಮಾರ ಅಸೋದೆ, ಕೆ.ಕೆ.ಮೈಶಾಳೆ, ಸುದರ್ಶನ ಖೋತ, ತಾತ್ಯಾಸಾಬ ಕಾಟೆ, ಸುರೇಖಾ ಘಾಳಿ ಮತ್ತು ಜೀವಂಧರ ಪಾಟೀಲ ಇದ್ದರು.ಇಂದ್ರಜೀತ ಪಾಟೀಲ ಸ್ವಾಗತಿಸಿದರು. ಗ್ರಾ.ಪಂ.ಅಧ್ಯಕ್ಷ ಶಂಕರದಾದಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜೀತ ಸಗರೆ ನಿರೂಪಿಸಿದರು. ಅಶೋಕ ನಾರೆ ವಂದಿಸಿದರು.ಶಿರಮೊಜಿಗೆ ಪ್ರಥಮ ಸ್ಥಾನ

ಬೆಳಗಾವಿ:
ಕನ್ನಡ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತರ ಕಾಲೇಜು ಆಶುಭಾಷಣ ಸ್ಪರ್ಧೆಯಲ್ಲಿ ಮರಾಠಾ ಮಂಡಳ ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಗೃಹ ವಿಜ್ಞಾನ ಕಾಲೇಜಿನ ಬಿಎ ಪ್ರಥಮ ವರ್ಷದ ಬಾಬು ಶಿರಮೊಜಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry