ನಿರೀಕ್ಷಣಾ ಜಾಮೀನಿಗೆ ಕಠಿಣ ಷರತ್ತು: ಸುಪ್ರೀಂ ಅಸಮ್ಮತಿ

5

ನಿರೀಕ್ಷಣಾ ಜಾಮೀನಿಗೆ ಕಠಿಣ ಷರತ್ತು: ಸುಪ್ರೀಂ ಅಸಮ್ಮತಿ

Published:
Updated:

ನವದೆಹಲಿ: ವ್ಯಕ್ತಿಯೊಬ್ಬನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನ್ಯಾಯಾಲಯಗಳು ಕಠಿಣ ಷರತ್ತುಗಳನ್ನು ವಿಧಿಸಬಾರದು. ಏಕೆಂದರೆ ಅದು ಆ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಚ್ಯುತಿ ತರುತ್ತದೆ  ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಪೊಲೀಸ್‌ ಇಲಾಖೆಯಿಂದ ಮುಕ್ತ ತನಿಖೆ   ಮತ್ತು ಆರೋಪಿಯ ವೈಯಕ್ತಿಕ ಹಕ್ಕುಗಳ ರಕ್ಷಣೆಯ ಮಧ್ಯೆ ನ್ಯಾಯಾಲಯಗಳು ಸಮತೋಲನ ಕಾಯ್ದುಕೊಳ್ಳಬೇಕೆಂದು ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಮತ್ತು  ನ್ಯಾಯಮೂರ್ತಿ ರಂಜನಾ ಪ್ರಕಾಶ್‌ ದೇಸಾಯಿ ಅವರನ್ನು ಒಳಗೊಂಡ ಪೀಠ ತಿಳಿಸಿದೆ.ನಿರೀಕ್ಷಣಾ ಜಾಮೀನಿಗೆ ‘ಯಾವುದೇ ಷರತ್ತು’ ವಿಧಿಸಬಹುದು ಎಂಬ ಸಿಆರ್‌ಪಿಸಿ 438ನೇ ಕಲಮನ್ನು ‘ಮನಸ್ವೇಚ್ಛೆ ಷರತ್ತು ವಿಧಿಸಲು ನೀಡಿದ ಅವಕಾಶ’ ಎಂದು ನ್ಯಾಯಾಲಯಗಳು ವ್ಯಾಖ್ಯಾನಿಸಬಾರದು. ಯಾವುದೇ ಷರತ್ತು ನ್ಯಾಯೋಚಿತವಾಗಿರಬೇಕು ಎಂದು ಪೀಠ ಸ್ಪಷ್ಟವಾಗಿ ಹೇಳಿದೆ.ತನಿಖೆಗೆ ಅಡ್ಡಿಯಾಗುತ್ತದೆ ಎಂದು ಮನವರಿಕೆ ಆದಾಗ ಮಾತ್ರ ಷರತ್ತು ವಿಧಿಸಬಹುದು. ಆದ್ದರಿಂದ ನ್ಯಾಯಾಲಯಗಳು ಈ ವಿಷಯದಲ್ಲಿ ಅತ್ಯಂತ ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಅದು ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry