ಗುರುವಾರ , ಜೂನ್ 17, 2021
29 °C

ನಿರೀಕ್ಷಿತ ಗೆಲುವು: ಹೆಗ್ಡೆ ಹರ್ಷ

ಪ್ರಜಾವಾಣಿ ವಾರ್ತೆ / ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

ಉಡುಪಿ: `ಇದು ನಿರೀಕ್ಷಿತ ಗೆಲುವು, ಆದರೆ ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ನಿರೀಕ್ಷೆ ಇತ್ತು~  ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಜಯಿಯಾದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಗೆಲುವಿನ ನಗೆಬೀರುತ್ತಾ ವ್ಯಕ್ತಪಡಿಸಿದ ಮೊದಲ ಪ್ರತಿಕ್ರಿಯೆ ಇದು.

ಕುಂಜಿಬೆಟ್ಟು ಟಿ.ಎ.ಪೈ. ಆಂಗ್ಲ ಮಾಧ್ಯಮ ಶಾಲೆ ಮತ ಎಣಿಕೆ ಕೇಂದ್ರದ ಬಳಿ ಅವರು ಬುಧವಾರ `ಪ್ರಜಾವಾಣಿ~ ಜತೆ ಹರ್ಷ ಹಂಚಿಕೊಂಡರು. `ಇದು ಪಕ್ಷಕ್ಕಾಗಿ ದುಡಿದವರ, ಕಾರ್ಯಕರ್ತರ ಗೆಲುವು. ಕಾರ್ಯಕರ್ತರಿಗೆ, ಪಕ್ಷದ ಮುಖಂಡರಿಗೆ, ಮತದಾರರಿಗೆ ಈ ಗೆಲುವನ್ನು ಅರ್ಪಿಸುವೆ~ ಎಂದರು.

`ಒಳ್ಳೆಯವರಿಗೆ ಇನ್ನೂ ಕಾಲವಿದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಜಯ ಪ್ರಕಾಶ್ ಹೆಗ್ಡೆ ಒಳ್ಳೆಯ ವ್ಯಕ್ತಿ, ಪ್ರಾಮಾಣಿಕ ಎನ್ನುವ ಜನಾಭಿಪ್ರಾಯ ಎಲ್ಲೆಡೆ ಇತ್ತು. ಹೀಗಾಗಿ ಮತದಾರರು ನನ್ನತ್ತ ಹೆಚ್ಚಿನ ಒಲವು ತೋರಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇನ್ನಷ್ಟು ಒಳ್ಳೆಯ ಅಭ್ಯರ್ಥಿಗಳು ಗೆಲ್ಲು ವಂತಾಗಲು ಈ ಗೆಲುವು ಸಹಕಾರಿ~ ಎಂದರು.

ಜೆಡಿಎಸ್ ಪರಿಣಾಮ: `ಜೆಡಿಎಸ್ ಅಭ್ಯರ್ಥಿ ಬೋಜೇಗೌಡ ಅವರ ಸ್ಪರ್ಧೆ ಯಿಂದ ಜಾತ್ಯತೀತ ಮತಗಳ ವಿಭಜನೆಯಾಗಿದೆ. ಹೀಗಾಗಿ ಗೆಲುವಿನ ಪ್ರಮಾಣದಲ್ಲಿ ಸ್ವಲ್ಪ ಮತ ಕಡಿಮೆಯಾದವು~ ಎಂದ ಹೆಗ್ಡೆ, ಯಡಿಯೂರಪ್ಪ ಪ್ರಚಾ ರಕ್ಕೆ ಬಾರದೇ ಇರುವ ಕಾರಣದಿಂದ ಲಿಂಗಾಯತರ ಮತಗಳು ವಿಭಜನೆಯಾಗಿ ತಮಗೆ ಆ ಮತಗಳು ಬಂದಿವೆ ಎನ್ನು ವುದನ್ನು ಒಪ್ಪಲಿಲ್ಲ.

`ಕಳೆದ ಬಾರಿಯ ನನ್ನ ಸೋಲಿನ ಬಗ್ಗೆ ಮತದಾರರಿಗೆ ಪಶ್ಚಾತ್ತಾಪವಿತ್ತು. ಅವರೇ ಈ ಬಾರಿ ಗೆಲ್ಲಿಸಿದ್ದಾರೆ~ ಎಂದರು.

`ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದ ಮಾತ್ರಕ್ಕೆ ಕಾಂಗ್ರೆಸ್ ಓಟುಗಳು ಬಿಜೆಪಿಗೆ ಹೋಗುತ್ತಿರಲಿಲ್ಲ. ಅವರೇನೂ ಬಿಜೆಪಿ ಅಭ್ಯರ್ಥಿಗೆ  50 ಸಾವಿರ ಲೀಡ್ ಕೊಡುತ್ತಿದ್ದರು ಎಂದೇನೂ ನನಗೆ ಅನ್ನಿಸುತ್ತಿಲ್ಲ. ಆದರೆ ಕೆಲ ಸಾವಿರ ಮತಗಳು ಅವರತ್ತ ವಾಲುತ್ತಿದ್ದವು. ಅಷ್ಟಕ್ಕೂ ಎಲ್ಲ ಮತದಾರರೇ ಕಾಂಗ್ರೆಸ್‌ನ ಪರವಾಗಿದ್ದರು~ ಎಂದರು.

`ಈ ಫಲಿತಾಂಶದಿಂದ ರಾಜ್ಯ ರಾಜಕೀಯದಲ್ಲಿ ಏನಾದರೂ ಬದಲಾವಣೆ ಆಗಬಹುದೇ?~ ಎಂಬ ಪ್ರಶ್ನೆಗೆ, `ಮುಂದಿನ ದಿನಗಳಲ್ಲಿ ಬದಲಾವಣೆ ಆಗಬಹುದು, ಇದು ಆರಂಭವಷ್ಟೇ~ ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.

`ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಈ ಫಲಿತಾಂಶದಿಂದ ಮುಖಭಂಗವಾಗಿರಬಹುದೇ?~ ಎನ್ನುವ ಪ್ರಶ್ನೆಗೆ `ಖಂಡಿತವಾಗಿಯೂ ಆಗಿದೆ.  ಅಷ್ಟಕ್ಕೂ ಅವರು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ಅವಲಂಬಿಸಿದೆ. ಅವರು ಸಂಸದರಾಗಿದ್ದಾಗ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ನಾನು ಕಳೆದ ಬಾರಿ ಸೋತಿದ್ದರೂ ಕ್ಷೇತ್ರದಲ್ಲಿ ಓಡಾಡಿ ಜನರ ಸಮಸ್ಯೆ ಆಲಿಸಿದ್ದೆ. ಸಂಸದನಾಗಿ  ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಆಡಳಿತವಿಲ್ಲ. ಬಿಜೆಪಿ ಭಿನ್ನಾಭಿಪ್ರಾಯ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರಿದೆ. ಮತದಾರರು ಇದನ್ನೆಲ್ಲ ಗಮನಿಸಿದ್ದಾರೆ~ ಎಂದರು.

ಲೋಕಸಭೆಯಲ್ಲಿ ಮಾತನಾಡುವೆ: `ವಿಧಾನಸಭೆಯಲ್ಲಿ ಮಾತ ನಾಡು ತ್ತ್ದ್ದಿದಂತೆಯೇ ಈ ಭಾಗದ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಚರ್ಚಿಸುವೆ. ನಂದಿಕೂರು ಯುಪಿಸಿಎಲ್ ಸಮಸ್ಯೆ, ವಾರಾಹಿ ಯೋಜನೆ, ರಾಷ್ಟ್ರೀಯ ಹೆದ್ದಾರಿ ಮೊದಲಾದ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾದ ಎಲ್ಲ ಪ್ರಯತ್ನ ಮಾಡುತ್ತೇನೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.