ನಿರೀಕ್ಷೆಗೂ ಮೀರಿ ಜಯ: ನಡಾಲ್

7

ನಿರೀಕ್ಷೆಗೂ ಮೀರಿ ಜಯ: ನಡಾಲ್

Published:
Updated:

ನ್ಯೂಯಾರ್ಕ್ (ಐಎಎನ್‌ಎಸ್): 13ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ತಾನು ಆಟ ಆರಂಭಿಸಿದಾಗ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಗೆಲುವಾಗಿದೆ ಎಂದು ವಿಶ್ವ ರ‍್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿರುವ ಸ್ಪೇನ್‌ನ ರಫೆಲ್ ನಡಾಲ್ ನುಡಿದಿದ್ದಾರೆ.

ಆರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಅಮೆರಿಕ ಓಪನ್ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನಡಾಲ್  6-2, 3-6, 6-4, 6-1ರಲ್ಲಿ ಸೆರ್ಬಿಯದ ನೊವಾಕ್ ಜಾಕೊವಿಚ್ ಅವರನ್ನು ಮಣಿಸಿ, ಪ್ರಶಸ್ತಿ ಜಯಿಸಿದ್ದರು.

27 ವರ್ಷದ ನಡಾಲ್‌ಗೆ ಇದು13ನೇ  ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ.

`ನನಗೆ ಖುಷಿಯಾಗುತ್ತಿದೆ. ಈ ಗೆಲುವು ನಾನು ನಿರೀಕ್ಷಿಸಿದ್ದಕ್ಕಿಂತ ಹಾಗೂ ಕಂಡ ಕನಸಿಗಿಂತಲೂ ಜಾಸ್ತಿಯಾಗಿದೆ' ಎಂದು ನಡಾಲ್ ಪ್ರತಿಕ್ರಿಯಿಸಿದ್ದಾರೆ.`ಭವಿಷ್ಯದಲ್ಲಿ ಸ್ಪರ್ಧಾತ್ಮಕ ಅವಕಾಶ ಪಡೆಯಲು ಹಾಗೂ ಇಂತಹ (ಅಮೆರಿಕ ಓಪನ್) ಟೂರ್ನಿಗಳನ್ನು ಜಯಿಸಲು ಅವಕಾಶ ಪಡೆಯುವ ದೃಷ್ಟಿಯಿಂದ ಮುಂದೆಯೂ ಹೀಗೆ ಅಭ್ಯಾಸ ನಡೆಸುತ್ತೇನೆ' ಎಂದೂ ನಡಾಲ್ ನುಡಿದ್ದಾರೆ.

ಜಾಕೊವಿಚ್ ಹಾಗೂ ನಡಾಲ್ ನಡುವೆ ನಡೆದ 37ನೇ ಪಂದ್ಯ ಇದಾಗಿತ್ತು. ಕಳೆದ 36 ಪಂದ್ಯಗಳ ಪೈಕಿ ನಡಾಲ್ 21ರಲ್ಲಿ ಗೆಲುವು ತಮ್ಮದಾಗಿಸಿಕೊಂಡಿದ್ದರು.

ಎಂಟು ಫ್ರೆಂಚ್ ಓಪನ್, ಎರಡು ವಿಂಬಲ್ಡನ್, ಎರಡು ಅಮೆರಿಕ ಓಪನ್  ಹಾಗೂ ಒಂದು ಆಸ್ಟ್ರೇಲಿಯನ್  ಸೇರಿದಂತೆ ಒಟ್ಟು 60 ಪ್ರಶಸ್ತಿಗಳನ್ನು ಗೆದ್ದಿರುವ ನಡಾಲ್, ರೋಜರ್ ಫೆಡರೆರ್ ಅವರ ಸಾಧನೆ ಹಿಂದಿಕ್ಕಲು (17 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ) ಇನ್ನೂ ನಾಲ್ಕು ಪ್ರಶಸ್ತಿಗಳನ್ನು ಜಯಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry