ನಿರುದ್ಯೋಗ ಸಮಸ್ಯೆಗೆ ಉದ್ಯಮ ಮದ್ದು

7

ನಿರುದ್ಯೋಗ ಸಮಸ್ಯೆಗೆ ಉದ್ಯಮ ಮದ್ದು

Published:
Updated:

ಶಿರಾ: ತಾಲ್ಲೂಕಿನಲ್ಲಿ ಶೀಘ್ರ ಕೈಗಾರಿಕೆಗಳು ಸ್ಥಾಪನೆಯಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ತಾಲ್ಲೂಕಿನ ಕೆರಯಾಗಲಹಳ್ಳಿ ಬಳಿ ಈಚೆಗೆ ಐಎಫ್‌ಜಿ ಇನ್ನೋಟಿವ್ ಫುಡ್ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರೈತರು ಈಚಿನ ದಿನಗಳಲ್ಲಿ ಕೃಷಿಯಲ್ಲಿ ಲಾಭವಿಲ್ಲವೆಂದು ನಗರಗಳತ್ತ ಮುಖ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ, ಐಎಫ್‌ಜಿ ಇನ್ನೋಟಿವ್‌ನ ವ್ಯವಸ್ಥಾಪಕ ನಿರ್ದೇಶಕ ಬಿರಾದರ್, ಕೃಷಿ ವಿಜ್ಞಾನಿ ಮೋಹನ್ ರೆಡ್ಡಿ, ತಹಶೀಲ್ದಾರ್ ನಾಗಹನುಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಅರೇಹಳ್ಳಿ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಎಸ್.ಗಂಗಾಧರ್, ಸದಸ್ಯ ಮುಕುಂದೇಗೌಡ, ಮುಖಂಡರಾದ ಗುಜ್ಜಾರಪ್ಪ, ಎನ್.ಸಿ.ದೊಡ್ಡಯ್ಯ, ಚಂಗಾವರ ಮಾರಣ್ಣ, ಡಿ.ಸಿ.ಅಶೋಕ್, ದೇವರಾಜು, ಗುಂಡಣ್ಣ, ಸಿದ್ದರಾಮೇಶ್ವರ, ಹುಲಿಕುಂಟೆ ರಮೇಶ್, ಟಿ.ರಾಘವೇಂದ್ರ, ಎಸ್.ಮಧುಸೂದನ, ಲಿಂಗರಾಜು, ಮಂಜೇಶ್, ಪಿಡಿಓ ವಿಜಯ್, ಪಿಎಸ್‌ಐ ನಧಾಪ್, ರಮೇಶ ಮೇಗಲಮನಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry