ಬುಧವಾರ, ಮೇ 12, 2021
20 °C
ಹಿರಿಯೂರು: ತರಬೇತಿ ಪಡೆದ ವಾಹನ ಚಾಲಕರ ಕೊರತೆ

ನಿರುಪಯುಕ್ತವಾದ ಪುರಸಭೆ ವಾಹನಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಬೇಡಿಕೆ ಸಲ್ಲಿಸದಿದ್ದರೂ ಯಾವುದೋ ಒತ್ತಡಕ್ಕೆ ಕಟ್ಟುಬಿದ್ದು ಇಲ್ಲಿನ ಪುರಸಭೆಗೆ ಸರ್ಕಾರದಿಂದ ಸರಬರಾಜು ಮಾಡಿರುವ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಾಹನಗಳಿಗೆ ಅಗತ್ಯ ತರಬೇತಿ ಪಡೆದ ಚಾಲಕರಿಲ್ಲದೆ ಅವೆಲ್ಲ ಪುರಸಭೆ ಕಚೇರಿಯ ಹಿಂಭಾಗ ಹಾಗೂ ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ನಿರುಪಯುಕ್ತವಾಗಿ ಬಿದ್ದಿವೆ ಎಂದು ವಂದೇಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಲ್.ಗಿರಿಧರ್ ಆರೋಪಿಸಿದ್ದಾರೆ.ರಸ್ತೆ ಬದಿಯಲ್ಲಿನ ಕಸವನ್ನು ಹೆಕ್ಕಲು ಸರ್ಕಾರದಿಂದ ಕೊಟ್ಟಿರುವ ಸುಮಾರು 45 ಲಕ್ಷ ರೂಪಾಯಿ ಬೆಲೆಯ ವಾಹನ ಹೆಚ್ಚು ಡೀಸೆಲ್ ಕುಡಿಯುತ್ತದೆ ಎಂಬ ಕಾರಣದಿಂದ ಮೂಲೆ ಸೇರಿದೆ. ಈ ವಾಹನಕ್ಕೆ ಡೀಸೆಲ್ ತುಂಬಿಸುವ ಹಣದಲ್ಲಿ ದಿನಗೂಲಿಯವರನ್ನು ನೇಮಕ ಮಾಡಿಕೊಂಡು ನಗರದ ಸ್ವಚ್ಛತೆ ನಿರ್ವಹಿಸಬಹುದು  ಎಂದು  ಪುರಸಭೆಯ ಹಿರಿಯ ಸದಸ್ಯರು ಹೇಳುತ್ತಾರೆ.

ಕಟ್ಟಿಕೊಂಡಿರುವ ಚರಂಡಿ ಸ್ವಚ್ಛಗೊಳಿಸಲು, ಅಕ್ರಮ ಕಟ್ಟಡ ಕೆಡವಲು, ಕಂಟೈನರ್‌ಗಳಲ್ಲಿರುವ ಕಸವನ್ನು ಟ್ರಾಕ್ಟರ್‌ಗೆ ತುಂಬಿಸುವ ಬೇರೆ ಬೇರೆ ರೀತಿಯ ವಾಹನಗಳು ಇದ್ದರೂ ಬಳಕೆ ಮಾತ್ರ ಆಗುತ್ತಿಲ್ಲ ಎಂದು ಅವರು ಆಪಾದಿಸಿದ್ದಾರೆ.ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂರ‌್ನಾಲ್ಕು ಚಾಲಕರನ್ನು ಹೊರತು ಪಡಿಸಿದರೆ ಉಳಿದವರೆಲ್ಲ ದಿನಗೂಲಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚಿರುವ ಜನಸಂಖ್ಯೆಗೆ ತಕ್ಕಂತೆ `ಡಿ' ಗುಂಪಿನ ಸಿಬ್ಬಂದಿಯನ್ನು ನೇಮಕ ಮಾಡದ ಕಾರಣ ನಾಗರಿಕರ ನಿರೀಕ್ಷೆಗೆ ತಕ್ಕಂತೆ ಸ್ವಚ್ಛತೆ ಕಾಪಾಡುವುದು ಕಷ್ಟ. ಸರ್ಕಾರ ತಕ್ಷಣ ಅಗತ್ಯವಿರುವ `ಡಿ' ಗುಂಪಿನ ನೌಕರರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಗಿರಿಧರ್ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.