ಸೋಮವಾರ, ಮೇ 17, 2021
26 °C

ನಿರ್ಗತಿಕ ಮಹಿಳೆಗೆ ಅಪಘಾತದಲ್ಲಿ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ನಿರ್ಗತಿಕ ಮಹಿಳೆಗೆ ಅಪಘಾತದಲ್ಲಿ ಗಾಯವಾಗಿದ್ದರಿಂದ ಗ್ರಾಮಸ್ಥರು ಆಕೆಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ ಘಟನೆ ಭಾನುವಾರ ನಡೆದಿದೆ.ತಾಲ್ಲೂಕಿನ ಧನ್ನೂರ ವಾಡಿಯ ಪುತಳಾಬಾಯಿ ಶರಣಪ್ಪ ಎನ್ನುವವರಿಗೆ ಬೀದಿಯಲ್ಲಿ ಹೋಗುವಾಗ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದ್ದರಿಂದ ಕೈ ಮತ್ತು ತಲೆಗೆ ಬಲವಾದ ಗಾಯವಾಗಿದೆ. ಆಕೆಯನ್ನು ತಕ್ಷಣ ಇಲ್ಲಿನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿಯಿತು.ಆದರೆ, ತಲೆಗೆ ಹೆಚ್ಚಿನ ಪೆಟ್ಟಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಬೀದರ್ ಆಸ್ಪತ್ರೆಗೆ ಸಾಗಿಸಲಾಯಿತು. ಈ ಸಂಬಂಧ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೂರು: ಮಹಿಳೆಗೆ ಸಂಬಂಧಿಕರು ಯಾರೂ ಇಲ್ಲದ್ದರಿಂದ ಅವರಿವರಿಂದ ಹಣ ಸಂಗ್ರಹಿಸಿ ಆಕೆಗೆ ಬಸವಕಲ್ಯಾಣದ ಆಸ್ಪತ್ರೆಗೆ ಮತ್ತು ಬೀದರ್‌ಗೆ ಸಾಗಿಸಲಾಯಿತು. 108 ಅಂಬ್ಯುಲನ್ಸ್‌ನಿಂದ ಧನ್ನೂರ ವಾಡಿಯಿಂದ ಬಸವಕಲ್ಯಾಣಕ್ಕೆ ತಕ್ಷಣ ಸಾಗಿಸಲಾಯಿತು.ಬೀದರ್‌ಗೆ ತೆಗೆದುಕೊಂಡು ಹೋಗಲು ಅದರ ಚಾಲಕ ಒಪ್ಪಿಕೊಳ್ಳದ ಕಾರಣ ಕೆಲಕಾಲ ತೊಂದರೆ ಆಯಿತು ಎಂದು ಮಹೇಶ ಕಾಟೆ, ಅಮೃತ ಹುಲಗುತ್ತಿ, ಅಶೋಕ ಮಂಠಾಳೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ.ರೋಗಿಗಳನ್ನು ಸಾಗಿಸುವಲ್ಲಿ ಅಂಬುಲನ್ಸ್‌ನವರು ವಿಳಂಬ ಮಾಡದಂತೆ ಕ್ರಮ ಕೈಗೊಳ್ಳಲು ವಿನಂತಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.