ನಿರ್ಗಮನದ ಬೆನ್ನಲ್ಲೇ ದಾಳಿ

7

ನಿರ್ಗಮನದ ಬೆನ್ನಲ್ಲೇ ದಾಳಿ

Published:
Updated:

ಶಿವಮೊಗ್ಗ: ಶಿವಮೊಗ್ಗದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಆರಂಭಿಸುವಾಗ ಈಶ್ವರಪ್ಪ ಮನೆಯಲ್ಲಿ ಇರಲಿಲ್ಲ. ಸ್ವಲ್ಪ ಮೊದಲು (ಸೋಮವಾರ ಬೆಳಿಗ್ಗೆಯೇ) ಅವರು ಕೊಪ್ಪಳಕ್ಕೆ ಪ್ರಯಾಣ ಬೆಳೆಸಿದ್ದರು. ಅವರು ಮನೆಯಿಂದ ನಿರ್ಗಮಿಸಿದ ಅರ್ಧ ಗಂಟೆಯಲ್ಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.

ಈಶ್ವರಪ್ಪ ಅವರ ಪತ್ನಿ ಜಯಲಕ್ಷ್ಮಿ ಯೋಗ ತರಗತಿಗೆ ಹೋಗಿದ್ದರು. 8.15ರ ವೇಳೆಗೆ ಅವರು ಮನೆಗೆ ಹಿಂದಿರುಗಿದರು.

ಈಶ್ವರಪ್ಪ ಅವರ ಮನೆಯ ಮೇಲೆ ಲೋಕಾಯುಕ್ತ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಅವರ ನಿವಾಸದತ್ತ ದೌಡಾಯಿಸಿದ ಅವರ ಬೆಂಬಲಿಗರು,  ಕಾರ್ಯಕರ್ತರು ಹಾಗೂ ಸಾರ್ವಜನಿಕರು ದೀರ್ಘಕಾಲ ಅಲ್ಲಿ ನಿಂತು ಕುತೂಹಲದಿಂದ ವೀಕ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry