ನಿರ್ಣಾ: ಪ್ರತಿಭಾನ್ವಿತರಿಗೆ ಪ್ರಶಸ್ತಿಪತ್ರ ವಿತರಣೆ

7

ನಿರ್ಣಾ: ಪ್ರತಿಭಾನ್ವಿತರಿಗೆ ಪ್ರಶಸ್ತಿಪತ್ರ ವಿತರಣೆ

Published:
Updated:

ಚಿಟಗುಪ್ಪಾ: ಹತ್ತಿರದ ನಿರ್ಣಾದಲ್ಲಿಯ ನಂದಿನಿ ಪ್ರೌಢ ಶಾಲೆ, ಮುಕ್ತ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ವಿವಿಧ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸುವ ಕಾರ್ಯಕ್ರಮ ಜರುಗಿತು.ಪ್ರಶಸ್ತಿ ಪತ್ರ ವಿತರಿಸಿ ಸನ್ಮಾನ ಸ್ವೀಕರಿಸಿ ವಕೀಲ ಬಸವಕುಮಾರ ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಂದಿನಿ ಸಮುಹ ಸಂಸ್ಥೆಗಳು ಸಲ್ಲಿಸುತ್ತಿರುವ ಶೈಕ್ಷಣಿಕ ಸೇವೆ ಎಲ್ಲರು ಮೆಚ್ಚುವಂತಿದ್ದು, ಸಂಸ್ಥೆಯ ಸಾಧನೆ ಶಿಕ್ಷಣ ತಜ್ಞರಿಗೆ ಅಧ್ಯಯನದ ವಿಷಯವಾಗಿ ರೂಪುಗೊಂಡಿದೆ ಎಂದು ತಿಳಿಸದರು.ಬಿಜೆಪಿ ಮುಖಂಡ ಸೋಮನಾಥ ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಿಜವಾದ ಶಿಕ್ಷಣದ ಮೌಲ್ಯಗಳು ಅಡಗಿದ್ದು, ಪ್ರಾಮಾಣಿಕವಾಗಿ ಅಭ್ಯಾಸ ಮಾಡುವ ಗುಣ ಇಲ್ಲಿಯ ವಿದ್ಯಾರ್ಥಿಗಳಲ್ಲಿ ಜೀವಂತವಾಗಿ ಉಳಿದಿರುವುದು ಹೆಮ್ಮೆ ಪಡುವ ಸಂಗತಿ ಆಗಿದೆ ಎಂದು ತಿಳಿಸಿದರು. ಅನಿಲಕುಮಾರ ಉಡಬನಳ್ಳಿ, ಹಣಮಂತರಾವ ಪಾಟೀಲ್, ಶ್ರೀದೇವಿ ಹೂಗಾರ್, ಸಾವಿತ್ರಾ, ಮನೋಜಕುಮಾರ ಬುಕ್ಕಾ, ಲಕ್ಷ್ಮಣರಾವ ತುರೆ, ಗ್ರಾಮ ಪಂಚಾಯಿತಿ ಸದಸ್ಯ ಸುನೀಲ ರೆಡ್ಡಿ ಲಚ್ಚನಗಾರ್, ಶ್ರೀನಿವಾಸ್ ಪತ್ತಾರ್, ಭೀಮರೆಡ್ಡಿ ಆಣದೂರ್, ಸಾಯಬಣ್ಣ ಇದಲಾಯಿ, ಸೂರ್ಯಕಾಂತ್ ಕಾಗಿ, ಈರಪ್ಪ ಕುರಿ, ಮುಖ್ಯಗುರು ಕವಿತಾ, ಸುಮಂಗಲಾ, ಅರ್ಚನಾ ಮತ್ತಿತರರು ಉಪಸ್ಥಿತರಿದ್ದರು.ಮಾತೊಶ್ರೀ ಸಂಗಮ್ಮ ಮಠಪತಿ ನೇತೃತ್ವ ವಹಿಸಿದ್ದರು. ಶಂಕರರಾವ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ರೇವಣಯ್ಯ ಮಠಪತಿ ಸ್ವಾಗತಿಸಿದರು. ಬಸವರಾಜ್ ಬನ್ನಳ್ಳಿ ನಿರೂಪಿಸಿದರು. ಮಲ್ಲರೆಡ್ಡಿ ವಂದಿಸಿದರು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry