ನಿರ್ದೇಶಕರ ವಿರುದ್ಧ ಕ್ರಮವೇ ಇಲ್ಲ!

7

ನಿರ್ದೇಶಕರ ವಿರುದ್ಧ ಕ್ರಮವೇ ಇಲ್ಲ!

Published:
Updated:

ಲೋಕನಾಥಪುರ(ಬಾಳೆಹೊನ್ನೂರು): ಸಾವಿರಾರು ರೈತರ ಪಾಲಿಗೆ ಆಪತ್ಕಾಲದ ಅನ್ನದಾತ ಆಗಿದ್ದ ಇಲ್ಲಿನ ಕರಿಮನೆ ಶ್ರೀರಾಮ ಸೇವಾ ಪ್ರಾಥಮಿಕ ಕೃಷಿ ಮತ್ತು ಸಹಕಾರಿ ಭೂ ಅಭಿವೃದ್ಧಿ  ಬ್ಯಾಂಕ್  ಅವನತಿಯ ಅಂಚಿಗೆ ತಲುಪಿದೆ. ಅವ ನತಿಗೆ ಕಾರಣಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ಚಿಕ್ಕಮಗಳೂರಿನ ಸಹ ಕಾರ ಸಂಘಗಳ ನಿಬಂಧಕರು ಸೂಚಿ ಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರು ವುದು ತಡವಾಗಿ ಬೆಳಕಿಗೆ ಬಂದಿದೆ.ಕೊಪ್ಪ ತಾಲ್ಲೂಕಿನ ಕರಿಮನೆ ಭೂ ಬ್ಯಾಂಕ್ ಕೆಲ ವರ್ಷಗಳ ಹಿಂದೆ ಸಾಲ ನೀಡಿಕೆ ಮತ್ತು ವಸೂಲಾತಿಯಲ್ಲಿ ರಾಜ್ಯದಲ್ಲೆ ಅತ್ಯುನ್ನತ ಸ್ಥಾನ ಪಡೆದಿತ್ತು. ಶಿವಮೊಗ್ಗ ಸಮೀಪದ ಸೊರಬ ಹೊರತು ಪಡಿಸಿದರೆ ಇಡೀ ರಾಜ್ಯದಲ್ಲಿ ಒಂದೇ ತಾಲ್ಲೂಕಿನಲ್ಲಿ ಎರಡು ಕೃಷಿ ಬ್ಯಾಂಕ್‌ಗಳಿರುವುದು ಇಲ್ಲಿ ಮಾತ್ರ.ಆದರೆ ಕೆಲ ವರ್ಷಗಳಿಂದ ಅಡಳಿತ ಮಂಡಳಿ ಕೈಗೊಂಡ ಅನಪೇಕ್ಷೀತ ತೀರ್ಮಾನಗಳು, ನಡೆಸಿದ ಅರ್ಥಿಕ ಅಪರಾಧಗಳಿಂದಾಗಿ ರೈತರು ಕೃಷಿ ಸಾಲದಿಂದ ವಂಚಿತರಾಗಿದ್ದಾರೆ ಎಂಬ ಆರೋಪ ಅಡಳಿತ ಮಂಡಳಿ ಸದಸ್ಯರಿಂದಲೇ ಕೇಳಿಬಂದಿದೆ.    ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ 10 ಅವ್ಯಹಾರ ಗಳ ಬಗ್ಗೆ ತನಿಖೆ ನಡೆಸುವಂತೆ ಅಡಳಿತ ಮಂಡಳಿ ಸೂಚಿಸಿದ ಹಿನ್ನೆಲೆಯಲ್ಲಿ  ಇಲ್ಲಿ ನಡೆದ ಅವ್ಯವಹಾರಗಳ ಬಗ್ಗೆ  ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 19 59ರ ಕಲಂ 64ರ ಅಡಿಯಲ್ಲಿ ವಿಚಾರಣೆ ನಡೆಸಿ ವರದಿ ನೀಡಲು  ಕೊಪ್ಪದ ಸಹಕಾರ ಅಭಿವೃದ್ಧಿ ಅಧಿಕಾರಿ ಯನ್ನು ಚಿಕ್ಕಮಗಳೂರಿನ ಸಹಕಾರ ಸಂಘಗಳ ನಿಬಂ ಧಕರು ನೇಮಿಸಿದ್ದರು. ಅವರು ಆರೋಪ, ದಾಖಲೆ, ಹೇಳಿಕೆ, ಸಾಕ್ಷಿಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿ ಅಕ್ಟೋಬರ್ 23, 2010ರಂದು ವರದಿ ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ 10 ಆರೋಪಗಳಲ್ಲಿ 6 ಆರೋಪಗಳು ಸಾಬೀತಾಗಿವೆ. ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ವ್ಯವಸ್ಥಾಪಕರು ಹಾಗೂ ಕ್ಷೇತ್ರ ಸಿಬ್ಬಂದಿ ಸೇರಿದಂತೆ ಎಲ್ಲರಿಂದ ಅಧಿಕಾರ ದುರುಪಯೋಗ, ಕಾಯಿದೆ ಉಲ್ಲಂಘನೆ, ಅರ್ಥಿಕ ಶಿಸ್ತು ಪಾಲಿಸದಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಇಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾದವರೇ ಬ್ಯಾಂಕಿನ ಅಧಿಕಾರದ ಗದ್ದುಗೆಯಲ್ಲಿದ್ದಾರೆ.ನಾಳೆ- ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry