ನಿರ್ದೇಶನದತ್ತ ರಣ್‌ವೀರ್ ಚಿತ್ತ

7

ನಿರ್ದೇಶನದತ್ತ ರಣ್‌ವೀರ್ ಚಿತ್ತ

Published:
Updated:

ರಣ್‌ವೀರ್ ಸಿಂಗ್ ಬಾಲಿವುಡ್‌ನಲ್ಲಿ ಕೇವಲ ಎರಡೇ ಚಿತ್ರಗಳನ್ನು ಮಾಡಿದ್ದರೂ ಇದೀಗ ತಮ್ಮ ಚಿತ್ತ ಕ್ಯಾಮೆರಾ ಮುಂದೆ ನಿಲ್ಲುವುದಕ್ಕಿಂತ ಹಿಂದೆ ನಿಲ್ಲುವುದರತ್ತ ಒಲವು ತೋರುತ್ತಿದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.ಅನುಷ್ಕಾ ಶರ್ಮಾ ಜೊತೆಗೆ ಬ್ಯಾಂಡ್ ಬಾಜಾ ಬಾರಾತ್ ಹಾಗೂ ಲೇಡಿಸ್ ವರ್ಸೆಸ್ ರಿಕ್ಕಿ ಬಬೆಹೆಲ್ ಚಿತ್ರಗಳಲ್ಲಿ ನಟಿಸಿರುವ ರಣ್‌ವೀರ್ ಸಿಂಗ್ ಸದ್ಯ `ರಾಮ್‌ಲೀಲಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಪಡಕೋಣೆ ಜೊತೆಯಾಗಿದ್ದಾರೆ.ಲುಟೇರಾದಲ್ಲಿ ಸೋನಾಕ್ಷಿ ಸಿನ್ಹಾ ಜೊತೆಗೆ ಕಾಣಿಸಿಕೊಂಡಿರುವ ರಣ್‌ವೀರ್‌ಗೆ ಇದೀಗ, ನಟ ಹಾಗೂ ನಿರ್ದೇಶಕರಾಗಿರುವವರ ಬಗ್ಗೆ ಅಪಾರ ಗೌರವವಿದೆಯಂತೆ. ಈ ನಿಟ್ಟಿನಲ್ಲಿ ಅಮೀರ್‌ಖಾನ್ ನಟ, ನಿರ್ಮಾಪಕ ಹಾಗೂ ನಿರ್ದೇಶಕನೂ ಆಗಿರುವುದರಿಂದ ರಣ್‌ವೀರ್‌ನ ಆರಾಧ್ಯ ದೈವ ಆಗಿದ್ದಾರಂತೆ.

ಇನ್ನು ಕೆಲ ವರ್ಷಗಳಲ್ಲಿ ಕ್ಯಾಮೆರಾ ಹಿಂದೆ, ನಿರ್ದೇಶಕನ ಟೋಪಿ ಹಾಕಿಕೊಂಡ ರಣ್‌ವೀರ್‌ಸಿಂಗ್‌ನನ್ನು ನೋಡಲಿದ್ದೀರಿ ಎಂದೆಲ್ಲ ರಣ್‌ವೀರ್ ಹೇಳಿಕೊಂಡಿದ್ದಾರೆ.ರಾಮಲೀಲಾ ಚಿತ್ರಕ್ಕಾಗಿ ಮೀಸೆ ಬಿಟ್ಟಿರುವ ಈ `ರಿಕ್ಕಿ'ಗೆ ಹುಡುಗಿಯರಿಂದ `ಚಂದ ಕಾಣುತ್ತಿರುವೆ' ಎಂಬ ಕಾಂಪ್ಲಿಮೆಂಟ್‌ಗಳೇ ದಕ್ಕುತ್ತಿವೆಯಂತೆ. ಮೀಸೆಯ ಲುಕ್ ಒಂಚೂರು ಚಿಂತೆಯಾಗಿತ್ತು. ಆದರೆ ಹುಡುಗಿಯರು ಸ್ವೀಕರಿಸಿರುವ ಪರಿ ನೋಡಿದರೆ ಸಂತಸವಾಗುತ್ತದೆ ಎನ್ನುತ್ತಲೇ ಮೀಸೆಗೆ ಕೈ ಹಾಕುತ್ತಾರೆ ರಣ್‌ವೀರ್‌ಸಿಂಗ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry