ಶುಕ್ರವಾರ, ಜೂನ್ 25, 2021
29 °C

ನಿರ್ಧಾರ, ಅಧಿಕಾರ ಇನ್ನೂ ಪುರುಷರದ್ದೇ...

ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 8ರಂದು ಆಚರಿಸಿದ್ದೇವೆ. ಈ ತಿಂಗಳಿಡೀ ಈ ಆಚರಣೆಯ ಸಂಭ್ರಮ ಇದ್ದೇ ಇದೆ.  ಈ ಆಚರಣೆಯ ಕುರಿತಂತೆ ವಿಭಿನ್ನ ದನಿಗಳು.ಸಮಾಜದಲ್ಲಿ ಮಹಿಳೆಯರಿಗೆ ಸಿಗಬೇಕಾದ ಗೌರವ ಇಂದಿಗೂ ಕಡಿಮೆಯೇ. ನಾನು ಕೆಲಸ ನಿರ್ವಹಿಸುವ ಶಿಕ್ಷಣ ಕ್ಷೇತ್ರದ ಬಗ್ಗೇ ಹೇಳುವುದಾದರೆ ಶಿಕ್ಷಣ ಕೇಂದ್ರಗಳಲ್ಲಿ ಸುಮಾರು ಶೇ.95ರಷ್ಟು ಮಹಿಳೆಯರೇ ಇದ್ದಾರೆ.

 

ನಾಯಕತ್ವ, ನಿರ್ಧಾರ, ಅಧಿಕಾರಗಳೆಲ್ಲಾ ನಡೆಯುವುದು ಶೇ.5ರಷ್ಟಿರುವ ಪುರುಷರದ್ದೇ. ನಮ್ಮ ಯಾವ ಪ್ರತಿಪಾದನೆಗಳಿಗೂ ಇಲ್ಲಿ ಬೆಲೆ ಇ್ಲ್ಲಲ. ಹಾಗಾಗಿ ನಮ್ಮ ಅಗತ್ಯತೆಗಳನ್ನು, ಹಕ್ಕುಗಳನ್ನು ಕೇಳುವ ಸಲುವಾಗಿಯಾದರೂ ಒಂದು ವೇದಿಕೆ ಬೇಕು. ಮಹಿಳಾ ದಿನಾಚರಣೆ ಅತ್ಯಂತ ಮುಖ್ಯ ಎನ್ನುವುದು ನನ್ನ ಭಾವನೆ.

ಗೌರಿ ನಾರಾಯಣ್(ಶಿಕ್ಷಣ ಸಂಯೋಜಕರು)ಮಹಿಳೆಯರಿಗೆ ಸಿಗುವ ಒಂದು ಉತ್ತಮ ಅವಕಾಶ. ಅವಳ ಆಶೋತ್ತರ, ಸಮಸ್ಯೆಗಳ ಕಡೆ ಸಮಾಜ ಹಾಗೂ ಸರ್ಕಾರ ಮುಖ ಮಾಡುವುದರಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ತುಂಬ ಪ್ರಸ್ತುತ.

 

ಸ್ವಯಂ ಸೇವಾ ಸಂಸ್ಥೆಗಳು, ಸಾಮಾನ್ಯ ಮಹಿಳಾ ಸಂಘಟನೆಗಳು ಮುಂತಾದವು ಈ ದಿನವನ್ನು ಕಡ್ಡಾಯ ಅನ್ನುವಂತೆ ಆಚರಿಸಿಕೊಂಡು ಹೋಗುತ್ತಿರುವುದರಿಂದ ಎಲ್ಲಾ ಕ್ಷೇತ್ರದ ಮಹಿಳೆಯರು ಇದು ನಮ್ಮದೇ ದಿನ ಎನ್ನುವಂತೆ ಸಂಭ್ರಮ ಪಡುತ್ತಿದ್ದಾರೆ.ಆದರೆ, ಈ ರೀತಿಯ ಆಚರಣೆಗಳು ಸಮಾರಂಭವಾಗಿ ಮುಕ್ತಾಯವಾಗದೆ ಮಹಿಳಾ ಜಗತ್ತಿನ ಕುರಿತಾಗಿ ಹೊಸ ಚಿಂತನೆಗಳಿಗೆ ಕಾರಣವಾಗಿ ನೂತನ ಮನ್ವಂತರ ಸೃಷ್ಟಿಯಾಗಬೇಕು.

  ಮಂಜುಳಾ(ಮಹಿಳಾ ಆಯೋಗದ ಅಧ್ಯಕ್ಷೆ)

ನಮ್ಮ ದೇಶದಲ್ಲಿ ಎಲ್ಲ ವಿಶೇಷ ಸಂದರ್ಭಗಳನ್ನು ಆಚರಿಸುತ್ತೇವೆ. ಅಡಿಗೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಈಗ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ವಿಶೇಷವೇ ಅಲ್ಲವೆ? ಮಹಿಳೆಯರು ಮಾಡಿದ ಸಾಧನೆಗಳನ್ನು ಗುರುತಿಸುವುದಕ್ಕೆ ಒಂದು ದಿನ ಬೇಕೇ ಬೇಕು.ನಾವು ಯಾವ ಹಿಂಜರಿಕೆಯೂ ಇಲ್ಲದೆ ಪಾಲ್ಗೊಳ್ಳುತ್ತೇವೆ. ಈಗ ಮಹಿಳೆಯರ ಸಂಘಟನೆಗಳು ಬೇಕಾದಷ್ಟಿವೆ. ಯಾರಿಗಾದರೂ ತೊಂದರೆಯಾದಾಗ ಆರ್ಥಿಕವಾಗಿಯೂ ಸಂಘಟನೆಗಳಿಂದ ಸಹಾಯ ಮಾಡುತ್ತಾರೆ. ಗ್ರಾಮೀಣ ಹಾಗೂ ನಗರದಲ್ಲಿರುವ ಮಹಿಳೆಯರಿಗೆ ಆ ದಿನ  ಒಂದಿಷ್ಟುಮಾನ್ಯತೆ, ಜೊತೆಗೊಂದಿಷ್ಟು ಕಾಳಜಿಗಳು ವ್ಯಕ್ತವಾಗುತ್ತವೆ.  

ಜಯಶ್ರೀ(ಗೃಹಿಣಿ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.