ನಿರ್ಬಂಧಕ್ಕೆ ಬೆಂಬಲ ಇಲ್ಲ: ರಷ್ಯ

7

ನಿರ್ಬಂಧಕ್ಕೆ ಬೆಂಬಲ ಇಲ್ಲ: ರಷ್ಯ

Published:
Updated:

ಮಾಸ್ಕೊ (ಐಎಎನ್‌ಎಸ್/ಆರ್‌ಐಎ ನವೊಸ್ತಿ): ಪಾಶ್ಚಾತ್ಯ ರಾಷ್ಟ್ರಗಳು ಇರಾನ್ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಬೆಂಬಲಿಸುವುದಿಲ್ಲ ಎಂದಿರುವ ರಷ್ಯ, ಈ ನಿರ್ಬಂಧದ ಹಿಂದೆ ಇರಾನ್‌ನಲ್ಲಿ ಆಡಳಿತ ಬದಲಾಗಲಿ ಎಂಬ ಉದ್ದೇಶ ಇದೆ ಎಂದು ಹೇಳಿದೆ.`ಇರಾನ್ ಪರಮಾಣು ಕಾರ್ಯಕ್ರಮದಿಂದ ಉಂಟಾಗಿರುವ ಬಿಕ್ಕಟ್ಟಿಗೆ ರಾಜತಾಂತ್ರಿಕವಾಗಿಯೇ ಮಾರ್ಗೋಪಾಯ ಕಂಡುಕೊಳ್ಳಬಹುದು ಎಂಬುದು ನಮ್ಮ ಆಶಯ. ಆದ್ದರಿಂದ ಈ ವಿಚಾರದಲ್ಲಿ ನಾವು ಪಾಶ್ಚಾತ್ಯ ದೇಶಗಳು ವಿಧಿಸಿರುವ ನಿರ್ಬಂಧವನ್ನು ಬೆಂಬಲಿಸುವುದಿಲ್ಲ~ ಎಂದು ರಷ್ಯದ ವಿದೇಶಾಂಗ ಇಲಾಖೆ ಉಪಸಚಿವ ಸೆರ‌್ಜಿ ರೇಬ್ಕಾವ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.ಅವಲೋಕನ (ವಾಷಿಂಗ್ಟನ್ ವರದಿ): ಇರಾನ್ ನಡೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ. ಜೊತೆಗೆ ಮಿತ್ರ ರಾಷ್ಟ್ರಗಳೊಂದಿಗೆ ಸತತ ಸಂಪರ್ಕ ಹೊಂದಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೇ ಕಾರ್ನೆ ತಿಳಿಸಿದ್ದಾರೆ.`ಅಂತರರಾಷ್ಟ್ರೀಯ ಕಟ್ಟುಪಾಡಿಗೆ ಇರಾನ್ ಬದ್ಧವಾಗಿರಬೇಕು ಎಂಬುದು ನಮ್ಮ ಆಶಯ. ಆದ್ದರಿಂದ ಆ ರಾಷ್ಟ್ರವು ಅಣ್ವಸ್ತ್ರ ವಿಚಾರದಲ್ಲಿ ತನ್ನ ಹಿತಾಸಕ್ತಿಯನ್ನು ಪುನರ್ ಸ್ಪಷ್ಟಪಡಿಸಬೇಕು. ಈ ನಿಟ್ಟಿನಲ್ಲಿ ರಚನಾತ್ಮಕ ರೀತಿಯಲ್ಲಿ ಮಾತುಕತೆಗೆ ಇರಾನ್ ಆಸಕ್ತಿ ತೋರಿಸಬೇಕು~ ಎಂದಿದ್ದಾರೆ.`ಪರಮಾಣು ಕಾರ್ಯಕ್ರಮಕ್ಕೆ ಇರಾನ್‌ನಲ್ಲೇ ಪ್ರತಿರೋಧ ವ್ಯಕ್ತವಾಗಿದೆ. ಶಾಂತಿಯುತ ಪ್ರತಿಭಟನೆಯನ್ನು ಆ ದೇಶ ಬಲವಂತವಾಗಿ ಹತ್ತಿಕ್ಕುತ್ತಿದೆ. ಜನರ ಹಿತಾಸಕ್ತಿಯನ್ನು ಕಡೆಗಣಿಸಿರುವ ಇರಾನ್ ಸರ್ಕಾರ, ಪ್ರತಿರೋಧ ವ್ಯಕ್ತಪಡಿಸಿದವರನ್ನು ಗೃಹ ಬಂಧನದಲ್ಲಿ ಇರಿಸಿದೆ~ ಎಂದು ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ವಿಕ್ಟೋರಿಯಾ ನುಲೆಂಡ್ ಸುದ್ದಿಗಾರರಿಗೆ ತಿಳಿಸಿದ್ದಾರೆ.`ಇರಾನ್ ಈಗ ಮಾತುಕತೆಗೆ ಮುಂದಾಗುವ ಮಾತನ್ನು ಆಡುತ್ತಿದೆ. ಇದು ಆ ದೇಶದ ಮೇಲೆ ವಿಧಿಸಿರುವ ನಿರ್ಬಂಧಗಳು ಎಷ್ಟು ಪರಿಣಾಮಕಾರಿಯಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಇರಾನ್ ತನ್ನ ಈ ಪ್ರಯತ್ನ ಶಾಂತಿಯ ಉದ್ದೇಶಕ್ಕೆ ಎಂದು ಹೇಳಿಕೊಂಡಿದೆ. ಆದರೆ ಇಂತಹ ಆಶಯವನ್ನು ಆ ದೇಶ ತನ್ನ ನಡೆ-ನುಡಿಯಲ್ಲೂ ಪ್ರದರ್ಶಿಸುವ ಅಗತ್ಯ ಇದೆ~ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry