ಶುಕ್ರವಾರ, ಮೇ 14, 2021
35 °C

ನಿರ್ಬಂಧ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಚಾಲ್ತಿ ಖಾತೆ ಕೊರತೆ(ಸಿಎಡಿ) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ `ಭಾರತೀಯ ರಿಸರ್ವ್ ಬ್ಯಾಂಕ್' (ಆರ್‌ಬಿಐ) ಚಿನ್ನ ಆಮದು ಮೇಲೆ ಹೇರಿದ್ದ ನಿರ್ಬಂಧವನ್ನು ಇನ್ನಷ್ಟು ಅವಧಿ ಗೆ ವಿಸ್ತರಿಸಿದೆ.ಚಿನ್ನ ಆಮದು ನಿರ್ಬಂಧಕ್ಕೆ ಸಂಬಂಧಿಸಿದಂತೆ `ಆರ್‌ಬಿಐ' ಮೇ 13ರಂದು ಪ್ರಕಟಣೆ ಹೊರಡಿಸಿತ್ತು.ಆಭರಣ ತಯಾರಿಕಾ ಸಂಸ್ಥೆಗಳು ಮತ್ತು ರಫ್ತುದಾರರ ಬೇಡಿಕೆ ಪೂರೈಸಲು ಅಗತ್ಯವಿದ್ದಷ್ಟು ಮಾತ್ರ ಚಿನ್ನ ಆಮದು ಮಾಡಿಕೊಳ್ಳುವ ಅವಕಾಶ ಬ್ಯಾಂಕುಗಳಿಗೆ ನೀಡಲಾಗಿದೆ. ಆದರೆ, ಚಿನ್ನಾಭರಣ ರಫ್ತುದಾರರಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ. ರಫ್ತು ಹೆಚ್ಚುವುದರಿಂದ ವಿದೇಶಿ ವಿನಿಮಯದ ಹರಿವು ಹೆಚ್ಚಲಿದೆ. ಆದ್ದರಿಂದ ಈ ವಿನಾಯ್ತಿ ನೀಡಲಾಗಿದೆ ಎಂದು `ಆರ್‌ಬಿಐ' ಸ್ಪಷ್ಟಪಡಿಸಿದೆ.ಚಿನ್ನ ಆಮದು ವಹಿವಾಟಿಗೆ ಸಂಬಂಧಿಸಿದಂತೆ `ಲೆಟರ್ ಆಫ್ ಕ್ರೆಡಿಟ್' (ಮಾರಾಟಗಾರ ಮತ್ತು ಖರೀದಿದಾರರ ನಡುವಿನ ಹಣಕಾಸು ವ್ಯವಹಾರ ದಾಖಲೆ) ಬ್ಯಾಂಕಿಗೆ ಒದಗಿಸುವುದು ಕಡ್ಡಾಯ. ಪ್ರತಿಯೊಂದು ವಹಿವಾಟು ಸಹ ಈ ದಾಖಲೆಯನ್ನೇ ಆಧರಿಸಿ ನಡೆಯುತ್ತದೆ.ಆಮದು ಸಂಸ್ಥೆಗಳು ಮಾರಾಟಗಾರರಿಗೆ ಹಣ ಪಾವತಿಸಬೇಕಾದರೆ ಈ ದಾಖಲೆ (ಡಿಪಿ) ಕಡ್ಡಾಯ. ದಾಖಲೆ ಸಲ್ಲಿಸದೇ ಆಮದು ವಹಿವಾಟಿಗೆಅವಕಾಶವಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.