ಮಂಗಳವಾರ, ಜೂನ್ 15, 2021
24 °C

ನಿರ್ಭೀತಿಯಿಂದ ಮತ ಚಲಾಯಿಸಿ: ಮನೋಜ್ ಜೈನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ನಿರ್ಭೀತಿಯಿಂದ ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾ ಣಾಧಿಕಾರಿ ಮನೋಜ್ ಜೈನ್ ಹೇಳಿದರು.ನವನಗರದ ಜಿಲ್ಲಾಡಳಿತ ಭವನದ ಮುಂಭಾಗ ‘ಸ್ವೀಪ್’ ವತಿಯಿಂದ ಮತದಾರರ ಜಾಗೃತಿ ಮೂಡಿ ಸುವ ನಿಟ್ಟಿನಲ್ಲಿ ನಗರದ ಆಟೋರಿಕ್ಷಾಗಳ ಮಾಲೀಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.ಮತದಾನ ಪವಿತ್ರವಾದ ಕರ್ತವ್ಯ, ಪ್ರಜಾ ಪ್ರಭುತ್ವದ ಭದ್ರತೆಗೆ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದರು.

ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಕಡಿಮೆ ಮತ ದಾನವಾಗುತ್ತಿದ್ದು, ಮತದಾರರು ನಿರಾಶರಾಗ ಬಾರದು. ಉತ್ತಮ ನಾಗರಿಕನಾಗುವ ಜತೆಗೆ ಉತ್ತಮ ಮತದಾರರಾಗಬೇಕು. ವ್ಯಕ್ತಿಯ ಮನೋಬಲದ ಸರಿಯಾದ ಸದ್ಬಳಕೆಯನ್ನು ಮತದಾನದ ಮೂಲಕ ಸಾಬೀತು ಪಡಿಸ ಬೇಕಾಗಿದೆ ಎಂದರು.ಸ್ವೀಪ್ ಸಮಿತಿಯ ಅಧ್ಯಕ್ಷ ಎಸ್.ಜಿ.ಪಾಟೀಲ ಅವರು ಮತದಾನದ ಜಾಗೃತಿ ಬಿಂಬಿಸುವ ಭಿತ್ತಿಚಿತ್ರಗಳನ್ನು ನಗರದ 800 ಆಟೋರಿಕ್ಷಾ ಮಾಲೀಕರಿಗೆ ವಿತರಿಸಿದರು.ಸ್ವೀಪ್ ನೋಡಲ್ ಅಧಿಕಾರಿ ಮಂಜುನಾಥ ಸುಳ್ಳೊಳ್ಳಿ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಅಮರೇಶ ನಾಯಕ, ಎನ್ಐಸಿಯ ಗಿರಿಯಾಚಾರ್‌ ಉಪಸ್ಥಿತರಿದ್ದರು.‘ಮತದಾನದಲ್ಲಿ ಭಾಗವಹಿಸಿ’

ಬನಹಟ್ಟಿ:
ಹದಿನೆಂಟು ಮೇಲ್ಪಟ್ಟ ಮತ್ತು ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿ ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಬೇಕು ಮತ್ತು ಜೊತೆಗೆ ಇತರರಿಗೂ ಮತದಾನದಲ್ಲಿ ಭಾಗವಹಿಸುವಂತೆ ತಿಳಿ ಹೇಳಬೇಕು. ಮತದಾನ  ಪ್ರತಿಯೊಬ್ಬರ  ಕರ್ತವ್ಯ. ನಮಗೆ ಸಂವಿಧಾನ ನೀಡಿರುವ ಮಹತ್ತರವಾದ ಹಕ್ಕಾಗಿದೆ ಎಂದು ತೇರದಾಳದ ವಿಶೇಷ ಉಪ ತಹಶೀಲ್ದಾರ್‌ ಎಸ್‌.ಬಿ. ಕಾಂಬಳೆ ತಿಳಿಸಿದರು.ಅವರು ಶುಕ್ರವಾರ ರಬಕವಿ ಬನಹಟ್ಟಿ ನಗರಸಭೆಯ ಸಹಯೋಗದೊಂದಿಗೆ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತದಾನದ ಜಾಗೃತಿಗಾಗಿ ಹಮ್ಮಿಕೊಂಡ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭೆ ಪೌರಾಯುಕ್ತ ಆರ್‌.ಎಂ. ಕೊಡಗೆ, ಪ್ರಾಚಾರ್ಯ ಡಾ.ಸುನಂದಾ ಶಿರೂರ, ತೇರದಾಳದ ಕಂದಾಯ ನಿರೀಕ್ಷಕ ಎಸ್‌. ಎಲ್‌.ಕಾಗಿಯವರ, ಈರಣ್ಣ ಕೊಣ್ಣೂರ, ರಮೇಶ ಮಳ್ಳಿ, ಎಸ್‌.ಬಿ.ಪಾಟೀಲ, ಆಕಾಶ ಬಳೋಲ ಗಿಡದ, ಎಂ.ಜಿ.ಪಠಾಣ, ಪ್ರೊ.ಶಂಕರ ಅರಬಳ್ಳಿ ಉಪಸ್ಥಿತರಿದ್ದರು.ಮಹಾವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಮತದಾನ ಮಾಡುವ ಕುರಿತು ಘೋಷಣೆ ಕೂಗುತ್ತ ಸಂಚರಿಸಿದರು.‘ಮತದಾನ ಪ್ರತಿಯೊಬ್ಬರ ಹಕ್ಕು’

ಬಾದಾಮಿ:
‘ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.

ರಾಷ್ಟ್ರದ ಅಭಿವೃದ್ಧಿಗೆ ಮತದಾನ ಪೂರಕ ವಾಗಿದೆ. ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯ ವಾಗಿ ಮತವನ್ನು ಚಲಾಯಿಸಬೇಕು’ ಎಂದು ತಹಶೀಲ್ದಾರ್‌ ಅಜೀಜ್‌ ದೇಸಾಯಿ ಹೇಳಿದರು.ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಪುರಸಭೆ ಮತ್ತು ತಾಲ್ಲೂಕು ಆಡಳಿತ ಆಶ್ರಯದಲ್ಲಿ ಈಚೆಗೆ ಜರುಗಿದ ಮತದಾನ ಜಾಗೃತಿ ಅಭಿಯಾನ ಸಮಾರಂಭದಲ್ಲಿ ಅವರು ಹೇಳಿದರು.ನಗರದ ಮುಖ್ಯ ಬೀದಿಯಲ್ಲಿ ಮತದಾನ ಜಾಗೃತಿ ಜಾಥಾ ಸಂಚರಿಸಿ ನಂತರ ವೀರಪುಲಿಕೇಶಿ ವೃತ್ತದಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ಮೂಲಕ ಮತದಾನ ಜಾಗೃತಿಯ ಘೋಷಣೆಗಳನ್ನು ಹೇಳಿದರು.ತಾಲ್ಲೂಕು ಪಂಚಾಯ್ತಿ ಇಒ ವೆಂಕಟಾಚಲಪತಿ, ಬಿಇಒ ಎ.ಎಂ. ವಡಗೇರಿ, ಪುರಸಭೆ ಮುಖ್ಯಾಧಿಕಾರಿ  ಗೋಪಾಲ ಕಾಸೆ, ಪ್ರಾಚಾರ್ಯ ಡಾ. ಸಣ್ಣ ಸಕ್ಕರಗೌಡರ ಡಿ.ಎಂ. ಪೈಲ್‌, ಎ.ಎಂ. ಹಿರೇಮಠ, ಶಂಕರ ಹೂಲಿ, ಚಂದ್ರಕಾಂತ ತಾಳಿಕೋಟಿ ಮತ್ತು ಪುರಸಭೆ ಸಿಬ್ಬಂದಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.