ಶನಿವಾರ, ಏಪ್ರಿಲ್ 17, 2021
31 °C

ನಿರ್ಮಾಪಕ ಸೂರಪ್ಪಬಾಬು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ದಿ.ತೂಗುದೀಪ ಶ್ರೀನಿವಾಸ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ತಪ್ಪೊಪ್ಪಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದ ನಿರ್ಮಾಪಕ ಸೂರಪ್ಪ ಬಾಬು ಮಂಗಳವಾರ ತೀವ್ರ ಅಸ್ವಸ್ಥತೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸೋಮವಾರ ಅಭಿಮಾನಿಗಳು ಹಾಗೂ ತೂಗುದೀಪ ಕುಟುಂಬದ ಕ್ಷಮೆ ಯಾಚಿಸಿದ ಬಳಿಕ ಅವರು ಒತ್ತಡದಲ್ಲಿದ್ದರು. ಇದರಿಂದ ಸ್ವಲ್ಪ ನಿದ್ರೆ ಮಾತ್ರೆಗಳನ್ನು ಸೇವಿಸಿ ಮಲಗಿದ್ದರು.ಮಂಗಳವಾರ ಬೆಳಿಗ್ಗೆ ವೈಯಾಲಿಕಾವಲ್‌ನಲ್ಲಿರುವ ತಮ್ಮ ಕಚೇರಿಗೆ ಬಂದಾಗ ನಿತ್ರಾಣಗೊಂಡು ಕುಸಿದುಬಿದ್ದರು. ತಕ್ಷಣ ಅವರನ್ನು ಮಲ್ಲೇಶ್ವರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಈಗ ಅವರು ಚೇತರಿಸಿಕೊಳ್ಳುತ್ತಿರುವುದಾಗಿ ಆಪ್ತಮೂಲಗಳು ತಿಳಿಸಿವೆ.ಆತ್ಮಹತ್ಯೆಗೆ ಯತ್ನ?:
ಘಟನೆಯಿಂದ ಅಪಮಾನಗೊಂಡು ಅವರು ಮಂಗಳವಾರ ಬೆಳಿಗ್ಗೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ವದಂತಿ ಹಬ್ಬಿತ್ತು. ಆದರೆ ಇದನ್ನು ಸೂರಪ್ಪಬಾಬು ಅವರ ಕುಟುಂಬ ವರ್ಗ ಅಲ್ಲಗಳೆದಿದೆ.ಘಟನೆಯ ಹಿನ್ನೆಲೆ: ಸೂರಪ್ಪಬಾಬು ನಟ ದಿ. ತೂಗುದೀಪ ದರ್ಶನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವೀಡಿಯೊ ಅಂತರ್ಜಾಲ ತಾಣವೊಂದರಲ್ಲಿ ಬಿತ್ತರಗೊಂಡಿತ್ತು. ಇದರಿಂದ ಉದ್ರಿಕ್ತರಾದ ತೂಗುದೀಪರ ಅಭಿಮಾನಿಗಳು ಸೂರಪ್ಪಬಾಬು ಕ್ಷಮೆಯಾಚನೆಗೆ ಆಗ್ರಹಿಸಿದ್ದರು.ಅಲ್ಲದೆ ಸೂರಪ್ಪಬಾಬು ಚಿತ್ರ ತಯಾರಿಸದಂತೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸೋಮವಾರ ನಡೆದ ಸಂಧಾನ ಸಭೆಯ ಬಳಿಕ ಸೂರಪ್ಪಬಾಬು ತೂಗುದೀಪ ಕುಟುಂಬದ ಕ್ಷಮೆ ಕೋರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.