ಸೋಮವಾರ, ಜೂನ್ 14, 2021
26 °C

ನಿರ್ಲಕ್ಷ್ಯ ಚಾಲನೆಯಿಂದ ವ್ಯಕ್ತಿ ಸಾವಿಗೆ ಕಾರಣ: ಆರೋಪಿಗೆ ಒಂದು ವರ್ಷ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿ ವ್ಯಕ್ತಿ ಒಬ್ಬರ ಸಾವಿಗೆ ಕಾರಣನಾದ ಆರೋಪಿಗೆ ಇಲ್ಲಿನ ಹೆಚ್ಚುವರಿ ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ.

ಆರೋಪಿ ಗುಬ್ಬಿ ತಾಲ್ಲೂಕಿನ ಯತೀಶ (30) ಎಂಬಾತನಿಗೆ ಐಪಿಸಿ 279 ಮತ್ತು 304(ಎ) ಕಲಂ ಅನ್ವಯ 3 ಸಾವಿರ ದಂಡ ಹಾಗೂ ಒಂದು ವರ್ಷ ಸಾದಾ ಸಜೆ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ ನಾಲ್ಕು ತಿಂಗಳ ಸಜೆ ವಿಧಿಸಿ ನ್ಯಾಯಾಧೀಶರಾದ ಎಸ್.ಶರ್ಮಿಳಾ ಗುರುವಾರ ತೀರ್ಪು ನೀಡಿದ್ದಾರೆ.

ಖಾಸಗಿ ಕೋಳಿ ಫಾರಂ ಒಂದರಲ್ಲಿ ಜೀಪು ಚಾಲಕನಾಗಿದ್ದ ಯತೀಶ 2008 ಫೆ. 1ರಂದು ಪೆತ್ತನಹಳ್ಳಿ ಗೇಟ್ ಬಳಿ ಸೈಕಲ್ ಸವಾರ ಪೆತ್ತನಹಳ್ಳಿಯ ನಾರಾಯಣ ಸ್ವಾಮಿಗೆ (40) ಜೀಪು ಡಿಕ್ಕಿ ಹೊಡೆಸಿದ್ದರಿಂದ ಅವರು ಸ್ಥಳದಲ್ಲೇ ಮೃಪಟ್ಟಿದ್ದರು. ತಿರುಮಲ ಶೆಟ್ಟಿಹಳ್ಳಿ ಪೊಲೀಸ್ ಠಾಣೆ ವೃತ್ತದ ಅಂದಿನ ಸಿಪಿಐ ಎಂ.ಎನ್.ರಾಮಲಿಂಗಪ್ಪ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಕೆ.ವಿ.ಅಶ್ವತ್ಥ ನಾರಾಯಣ ವಾದಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.